ನೂರಾರು ಜನರನ್ನು ಕಚ್ಚಿದ ಮಂಗ ಸೆರೆ

Monkey that bit hundreds of people arrested
Published on

ರಬಕವಿ&ಬನಹಟ್ಟಿ: ತಾಲೂಕಿನ ಆಸಂಗಿ ಗ್ರಾಮದಲ್ಲಿ 15 ದಿನಗಳಿಂದ ಮಕ್ಕಳು, ವಯೋವೃದ್ಧರು ಸೇರಿ ನೂರಕ್ಕೂ ಅಧಿಕ ಜನರನ್ನು ಕಚ್ಚಿ ತೀವ್ರ ಗಾಯಗೊಳಿಸಿದ್ದ ಕೋತಿಯನ್ನು ಗ್ರಾಮಸ್ಥರು ಭಾನುವಾರ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಅರಣ್ಯ ಇಲಾಖೆ ತಂಡದ ಜತೆಗೆ ಕೆಲ ಇಲಾಖೆಗಳ ಸಿಬ್ಬಂದಿಯು ಕೋತಿ ಸೆರೆಗೆ ಊರೆಲ್ಲ ತಿರುಗಾಡಿ ಸುಸ್ತಾಗಿದ್ದರು. ಭಾನುವಾರ ಗ್ರಾಮಸ್ಥರು ನಿದ್ರೆ ಬರುವಂತಹ ಔಷಧ ಹಾಕಿ ಇಟ್ಟಿದ್ದ ಬಾಳೆ ಹಣ್ಣು ತಿಂದ ಮಂಗ ಸುಸ್ತಾಗಿ ಬಲೆಗೆ ಬಿದ್ದಿದೆ.

ಆಸಂಗಿಯಲ್ಲಿ ವಾನರ ಕಾಟದ ಕುರಿತು ವಿಜಯವಾಣಿ ವರದಿ ಪ್ರಕಟಿಸಿ ಅರಣ್ಯ ಇಲಾಖೆಯ ಗಮನ ಸೆಳೆದಿತ್ತು. ಬಳಿಕ ಮಂಗನ ಸೆರೆ ಹಿಡಿಯಲು ಇಲಾಖೆ ವಿಶೇಷ ಪ್ರಯತ್ನಕ್ಕೆ ಕೈ ಹಾಕಿತ್ತು. ಈಗ ಮಂಗ ಸೆರೆ ಸಿಕ್ಕಿದ್ದರಿಂದ ಭಯದಲ್ಲಿಯೇ ಓಡಾಡುತ್ತಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಬಲೆಗೆ ಬಿದ್ದಿರುವ ಮಂಗನನ್ನು ಊರಾಚೆ ಸಾಗಿಸುತ್ತಿರುವ ಆಸಂಗಿ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net