ಕೊರ‌್ಲಕುಂಟೆಯಲ್ಲಿ ಕೋತಿಗಳ ಹಾವಳಿ

monkey download
Published on

ಚಳ್ಳಕೆರೆ: ತಾಲೂಕಿನ ಕೊರ‌್ಲಕುಂಟೆ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಅದರಲ್ಲೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಐದಾರು ಮಂಗಗಳು ಬೀಡು ಬಿಟ್ಟಿವೆ.

ಶಾಲಾ ಸಮೀಪ ಇರುವ ಮರಗಳಲ್ಲಿ ವಾಸವಾಗಿರುವ ಕೋತಿಗಳು ಬಿಸಿಯೂಟ ಸಮಯಕ್ಕೆ ಏಕಾಏಕಿ ಲಗ್ಗೆ ಹಾಕುವ ಮಂಗಗಳು, ಕೆಲ ಮಕ್ಕಳನ್ನು ಗಾಯಗೊಳಿಸಿವೆ. ಇದರಿಂದ ಭಯಭೀತರಾಗಿರುವ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.

ಈ ಸಮಸ್ಯೆ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜವಾಗಿಲ್ಲ. ಅನೇಕ ತಿಂಗಳುಗಳಿಂದ ಹಾವಳಿ ಇದ್ದು, ಐದಾರು ಮಂದಿಗೂ ಕಚ್ಚಿ ಗಾಯಗೊಳಿಸಿದೆ. ಆದರೂ ಸಂಬಂಧ ಪಟ್ಟ ಇಲಾಖೆ ಕ್ರಮಕೈಗೊಂಡಿಲ್ಲ.

ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರಮ ವಹಿಸದಿದ್ದರೆ ಶಾಲೆಗೆ ಬೀಗ ಹಾಕುವ ಪರಿಸ್ಥಿತಿ ಬರುತ್ತದೆ ಎಂದು ಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ಮಂಜುನಾಥ ರೆಡ್ಡಿ ಇತರರು ಆತಂಕ ವ್ಯಕ್ತಪಡಿಸಿದ್ದಾರೆ.

ದುಡ್ಡಿಲ್ಲ: ಕೋತಿಗಳನ್ನು ಹಿಡಿಯುವ ಜವಾಬ್ದಾರಿ ಅರಣ್ಯ ಇಲಾಖೆ ವಹಿಸಿಕೊಳ್ಳುತ್ತಿಲ್ಲ. ಕೋತಿ ಹಿಡಿಯುವವರ ಸಂಪರ್ಕ ಮಾಡಿಕೊಟ್ಟಿದ್ದಾರೆ. ಒಂದು ಮಂಗವನ್ನು ಹಿಡಿಯಲು ಐದಾರು ಸಾವಿರ ರೂಪಾಯಿ ಕೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಹಣದ ಕೊರತೆ ಇದೆ. ಕೂಡಲೇ ವ್ಯವಸ್ಥೆ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುವುದು-ಬಸವರಾಜ್, ಪಿಡಿಒ, ಗ್ರಾಪಂ ಪಗಡಲಬಂಡೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net