ದಾಳಿ ಮಾಡುತ್ತಿದ್ದ ಕೋತಿ ಕೊನೆಗೂ ಸೆರೆ!

3Naregal1A
Published on

ನರೇಗಲ್ಲ: ಡ.ಸ. ಹಡಗಲಿ ಗ್ರಾಮದ ಸವಡಿ ಹದ್ದಿನಲ್ಲಿ ಜನರ ಮೇಲೆ ದಾಳಿ ಮಾಡುತ್ತಿದ್ದ ಮಂಗನನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.

ಸವಡಿ ಹದ್ದಿನ ಲಕ್ಷ್ಮೀಕಲ್ಲ ರಸ್ತೆಯಲ್ಲಿ ಸಂಚರಿಸುವವರ ಮೇಲೆ ದಾಳಿ ಮಾಡಿ 7ಕ್ಕೂ ಅಧಿಕ ಜನರನ್ನು ಈ ಕಪಿ ಗಾಯಗೊಳಿಸಿತ್ತು. ಜನರು ಈ ಮಾರ್ಗವಾಗಿ ಸಂಚರಿಸಲು ಭಯಪಡುವಂತಹ ಸ್ಥಿತಿ ನಿರ್ವಣವಾಗಿತ್ತು. ಕೋತಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ, ಮಂಗಳವಾರ ರೈತರು ಸುಮಾರು 10 ಸಾವಿರದಷ್ಟು ದೇಣಿಗೆ ಸಂಗ್ರಹಿಸಿ ಗದಗದಿಂದ ಮಂಗ ಹಿಡಿಯುವವರನ್ನು ಕರೆಸಿ ಸೆರೆ ಹಿಡಿದಿದ್ದಾರೆ.

ಕೋತಿ ಹಿಡಿಯುವ ನಾಲ್ವರ ತಂಡ ಹಾಗೂ ಗ್ರಾಮದ ಕೆಲ ರೈತರು ಬಲೆ ಹಾಕಿ ಮಂಗನನ್ನು ಹಿಡಿದಿದ್ದಾರೆ. ಹಿಡಿದ ಕೋತಿಯನ್ನು ಗ್ರಾಮದ ರಂಗ ಮಂದಿರಲ್ಲಿ ಕೆಲಕಾಲ ಕೂಡಿಸಲಾಗಿತ್ತು. ಈ ವೇಳೆ ಗ್ರಾಮಸ್ಥರು ಮಂಗನನ್ನು ನೋಡಲು ಮುಗಿಬಿದ್ದರು. ಕೆಲವರು ರೊಟ್ಟಿ, ಬಾಳೆ ಹಣ್ಣು, ಬಿಸ್ಕತ್, ನೀರು ಕೊಟ್ಟರು. ಅರಣ್ಯಾಧಿಕಾರಿಗಳ ಸಲಹೆಯಂತೆ ಮಂಗವನ್ನು ಗದಗ ಸಮೀಪದ ಅರಣ್ಯಕ್ಕೆ ಬಿಡಲಾಯಿತು. ಗ್ರಾಮಸ್ಥರಾದ ಅಂದಪ್ಪ ಜಂತ್ಲಿ, ಈಶಪ್ಪ ದಾನರಡ್ಡಿ, ಶಿವಯೋಗಿ ಅರವಟಗಿಮಠ, ಶರಣಪ್ಪ ಮೇಟಿ, ಮುತ್ತು ಕಾಳಿ, ಲಕ್ಕಪ್ಪ ಕುಂಕದ, ಯಲ್ಲಪ್ಪ ಕಂಪ್ಲಿ, ಹೇಮಣ್ಣ ನಾಯ್ಕರ, ಬಸಯ್ಯ ಅರವಟಗಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net