ಮಂಗ ಅಡ್ಡ ಬಂದಿದ್ದರಿಂದ ಬಿದ್ದು ಬೈಕ್​ ಸವಾರ ಸಾವು

Bike Accident_2
Published on

ಹಾವೇರಿ: ರಸ್ತೆಯಲ್ಲಿ ಮಂಗ ಅಡ್ಡ ಬಂದಿದ್ದರಿಂದ ಬೈಕ್​ ಸವಾರ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೆಸರಳ್ಳಿ-ಕೋಣತಂಬಿಗಿ ಗ್ರಾಮದ ರಸ್ತೆಯಲ್ಲಿ ಭಾನುವಾರ ನಡೆದಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಯಡಿಹಳ್ಳಿಯ ವೀರಾಚಾರ ಮಾನಾಚಾರ ಬಡಿಗೇರ (37) ಮೃತ ಬೈಕ್​ ಸವಾರ.

ಈತ ಬೈಕ್​ ಮೇಲೆ ತೆರಳುತ್ತಿದ್ದ ಸಮಯದಲ್ಲಿ ರಸ್ತೆ ಮಧ್ಯೆ ಮಂಗ ಅಡ್ಡ ಬಂದಿದೆ. ಇದರಿಂದ ಬೈಕ್​ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net