

ಗುಳೇದಗುಡ್ಡ:ಪಟ್ಟಣದಲ್ಲಿ ಮಂಗವೊಂದು ಅಂದಾಜು 20ಕ್ಕೂ ಹೆಚ್ಚು ಜನರ ಮೇಲೆ ದಾಳಿಮಾಡಿ, ಕಚ್ಚಿ ಗಾಯಗೊಳಿಸಿದ ಟನೆ ಬುಧವಾರ ಸಂಜೆ ನಡೆದಿದ್ದು, ಟನೆಯಿಂದ ಜನತೆ ಭೀತಿಗೊಳಗಾಗಿದ್ದಾರೆ.ಮಂಗ ಏಕಾಏಕಿ ಜನರ ಮೇಲೆ ದಾಳಿ ಮಾಡಿ, ಕೈ, ಕಾಲು, ಬೆನ್ನಿಗೆ ಕಚ್ಚಿ ಗಾಯಗೊಳಿಸಿದ್ದು, ಗಾಯಗೊಂಡವರಲ್ಲಿ ಮಕ್ಕಳು, ಮಹಿಳೆಯರು, ವೃದ್ಧರೂ ಸೇರಿದ್ದಾರೆ. ಗಾಯಗೊಂಡವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ನಾಗರತ್ನಾ ಜೋಶಿ ಎಂಬ ಹಿರಿಯರು ಸಂಜೆ ಮಾರ್ಕೆಟ್ಗೆ ತೆರಳಲು ಮನೆಯಿಂದ ಹೊರಬಂದ ಸಂದರ್ಭದಲ್ಲಿ ಮಂಗ ಏಕಾಏಕಿ ದಾಳಿಮಾಡಿ, ಅವರ ಮೊಣಕೈಗೆ ಕಚ್ಚಿದೆ.ಮಂಗನ ದಾಳಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಜನರು ಸುರತವಾಗಿ ಮನೆಯೊಳಗೆ ಬಾಗಿಲು ಹಾಕಿಕೊಂಡು ಕುಳಿತು ಕೊಳ್ಳಬೇಕು, ಪಟಾಕಿ ಸಿಡಿಸದಂತೆ ಎಚ್ಚರಿಸಿದ್ದಾರೆ. ಗುರುವಾರ ಬೆಳಗ್ಗೆ ಮಂಗನನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸುವುದಾಗಿ ಅರಣ್ಯ ಪಾಲಕ ಭೀಮಪ್ಪ ಬಡಿಗೇರಿ ತಿಳಿಸಿದ್ದಾರೆ.
ಈ ಹಿಂದೆಯೇ ಮಂಗನನ್ನು ಹಿಡಿಯುವಂತೆ ಜನತೆ ಪುರಸಭೆಗೆ ಮನವಿ ಮಾಡಿದ್ದರಾದರೂ, ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಜಾರಿಗೊಂಡಿದ್ದರು. ಅದರ ಪರಿಣಾಮ ಈಗ ಜನತೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಳೇದಗುಡ್ಡದಲ್ಲಿ ಮಂಗನ ದಾಳಿಯಿಂದ ಗಾಯಗೊಂಡ ಹಿರಿಯರಾದ ನಾಗರತ್ನಾ ಜೋಶಿ.