ಈ ಮಂಗಗಳಿಗೆ ಮಕ್ಕಳೇ ಟಾರ್ಗೆಟ್​: ಗದಗದಲ್ಲಿ ಇಪ್ಪತ್ತೇ ದಿನಗಳಲ್ಲಿ ಐದು ಮಕ್ಕಳ ಮೇಲೆ ಮಂಗನ ದಾಳಿ

monkry
Published on

ಗದಗ: ನಗರದಲ್ಲಿ ಮಂಗನ ಕಾಟ ಹೆಚ್ಚಾಗಿದ್ದು, ಮಂಗಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೆರಿಗೆ ಆಸ್ಪತ್ರೆಗೆ ತಾಯಿಯೊಂದಿಗೆ ಬಂದಿದ್ದ ಮಗುವಿನ ಮೇಲೆ ಮಂಗ ದಾಳಿ ಮಾಡಿರುವುದು ವರದಿಯಾಗಿದೆ.

ಹೆರಿಗೆ ಆಸ್ಪತ್ರೆಗೆ ತಾಯೊಯೊಬ್ಬಳು ತನ್ನ ಮಗುವಿನೊಂದಿಗೆ ಬಂದಿದ್ದಾಗ ಮಗುವಿನ ಮೇಲೆ ಮಂಗ ದಾಳಿ ಮಾಡಿರುವ ಘಟನೆ ಗದಗ ನಗರದ ಕೆ.ಸಿ ರಾಣಿ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ಮಗು ಆಟವಾಡುತ್ತಿದ್ದಾಗ ಮಂಗ ದಾಳಿ ನಡೆಸಿದೆ. ಈ ದಾಳಿಯಿಂದಾಗಿ ಮಗುವಿನ ಬೆನ್ನಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಸದ್ಯ ಮಗುವಿಗೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿಂದೆ ಫೆ.9ರಂದು ಎರಡು ವರ್ಷದ ಆದ್ಯಾ ಹೆಸರಿನ ಮಗುವಿನ ಮೇಲೆ ಮಂಗ ದಾಳಿ ಮಾಡಿತ್ತು. ಮನೆ ಮುಂದೆ ಆಟವಾಡುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದ್ದ ಮಂಗ ಮಗುವಿನ ತಲೆ ಮತ್ತು ಬೆನ್ನಿನ ಭಾಗಕ್ಕೆ ಗಾಯ ಮಾಡಿತ್ತು. ಕಳೆದ 20 ದಿನಗಳಲ್ಲಿ ಐದಕ್ಕೂ ಹೆಚ್ಚು ಮಕ್ಕಳ ಮೇಲೆ ಮಂಗ ದಾಳಿ ಮಾಡಿರುವುದು ವರದಿಯಾಗಿದೆ. ದಾಳಿಯಿಂದಾಗಿ ಸಿಟ್ಟಿಗೆದ್ದಿರುವ ಸ್ಥಳೀಯರು ಅರಣ್ಯ ಇಲಾಖೆಯ ಮೇಲೆ ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net