ಕೂಡಿಗೆಯಲ್ಲಿ ಕೋತಿಗಳ ಹಾವಳಿ

monkey
Published on

ಕುಶಾಲನಗರ:

ಕೋತಿಗಳು ಸಾರ್ ಕೋತಿಗಳು... ಇದು ಕುಶಾಲನಗರ ತಾಲೂಕು ಕೂಡಿಗೆಯಲ್ಲಿನ ಹಾರಂಗಿ ನದಿ ದಂಡೆಯ ನಿವಾಸಿಗಳ ದಿನನಿತ್ಯದ ಅಳಲು. ಮನೆಯಂಗಳದಲ್ಲಿ, ಮನೆಗಳ ತಾರಸಿಗಳಲ್ಲಿ ಹಾಕಿದ ಬಟ್ಟೆಗಳು ಪ್ರತಿನಿತ್ಯ 'ಮಂಗ' ಮಾಯ ಆಗುತ್ತಿದೆ. ಕಾಳು - ಕಡ್ಡಿಗಳನ್ನು ಹೊರಗಡೆ ಒಣ ಹಾಕುವಂತೆಯೂ ಇಲ್ಲ.

ಮನೆ ಕೈ ತೋಟಗಳ ಗಿಡ ಮರಗಳಲ್ಲಿ ಬಿಡುವ ಹಣ್ಣು ಈ ಮಂಗಗಳಿಗೇ ಮೀಸಲು...

ಈ ವ್ಯಾಪ್ತಿಯಲ್ಲಿ ಭಾರಿ ಸಂಖ್ಯೆಯಲ್ಲ;ಇ ಬೀಡು ಬಿಟ್ಟಿರುವ ಮಂಗಗಳು ದಿನಂಪ್ರತಿ ಮನೆಯಂಗಳಕ್ಕೆ ಬಂದು ವಿಪರೀತ ಕಾಟ ಕೊಡುತ್ತಿವೆ ಎಂಬುದು ಸ್ಥಳೀಯ ನಿವಾಸಿಗಳ ಅಳಲು. ಈ ಸಂಬAಧ ಸ್ಥಳೀಯ ಗ್ರಾ.ಪಂ.ಗೆ ದೂರು ನೀಡಿದ್ದರೂ ಪಂಚಾಯಿತಿ ಅಧಿಕಾರಿಗಳಿಮದ ಯಾವುದೇ ಸ್ಪಂದನೆ ಇಲ್ಲ. ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ಮಂಗಗಳನ್ನು ಹಿಡಿದು ದೂರ ಒಯ್ಯುವ ಮೂಲಕ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಬೇಕೆಂಬುದು ಇಲ್ಲಿನ ಮಹಿಳೆಯರು ಆಗ್ರಹಿಸಿದ್ದಾರೆ.

ದಿನ ಬೆಳಗಾಯಿತೆಂದರೆ ಮನೆಯಂಗಳಕ್ಕೆ ಬರುವ ಗುಂಪು ಗುಂಪು ಮಂಗಗಳು ಮನೆಯಂಗಳದಲ್ಲಿ ಒಣಗಿ ಹಾಕುವ ಬಟ್ಟೆಗಳನ್ನು ಕದ್ದೊಯ್ದು ತಲೆ ಮೇಲೆ ಹೊತ್ತು ನಮನ್ನೇ ಅಣಕಿಸುತ್ತವೆ. ಕಾಳು - ಕಡ್ಡಿಗಳನ್ನು ಹೊತ್ತೊಯ್ದು ಹಾಳು ಮಾಡುತ್ತವೆ. ಗದರಿಸಲು ಹೋದರೆ ಕಚ್ಚಲು ಬರುತ್ತವೆ. ಯಾರಿಗೂ ಹೆದರದ ಇವುಗಳು ಒಂದೇ ಸಮನೆ ಅತ್ತಿಂದಿತ್ತ ಜಿಗಿದು ಮಾಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net