

ಮಂಡ್ಯ: ವಾಲ್ಕೆನೋ ಪಿಕ್ಚರ್ಸ್ ಬ್ಯಾನರ್ ಅಡಿ ಮಾಸ್ಚಿತ್ ಸೂರಿ ನಿರ್ದೇಶನದಲ್ಲಿ ಮಾಂಕ್ ದ ಯಂಗ್ ಚಲನಚಿತ್ರ ಮಾ.7ರಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ ಎಂದು ನಾಯಕ ನಟ ಸರೋವರ ಮನವಿ ಮಾಡಿದರು.
ಇದೊಂದು ವಿಜ್ಞಾನ ವಿಶಿಷ್ಟತೆಯ ಆಧಾರಿತ ಚಿತ್ರವಾಗಿದೆ. ಕಥೆ ಹೊಸತನವನ್ನು ಪರಿಚಯ ಮಾಡಿಕೊಡುತ್ತದೆ. ಚಿತ್ರದಲ್ಲಿ ಬಹುತೇಕ ಹೊಸ ತಾರಾಗಣವಿದೆ. ಮಂಡ್ಯದಲ್ಲಿ ಚಿತ್ರ ಗೆದ್ದರೆ, ಅದು ಇಂಡಿಯಾದಲ್ಲೇ ಗೆಲ್ಲುವಂತೆ ಮಾಡುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕ ಮಾಸ್ಚಿತ್ ಸೂರಿಯ ಮಾತನಾಡಿ, ಚಿತ್ರವನ್ನು ಬೆಂಗಳೂರು, ಮುತ್ಯಾಲಮಡುಗು, ಉಡುಪಿ, ಮಂಗಳೂರು, ಹೆಬ್ರಿ, ಸೀತಾನದಿ, ಕೊಡಗು ಹಾಗೂ ಅರಣ್ಯ ಪ್ರದೇಶದ ದೃಶ್ಯಗಳನ್ನು ಪಶ್ಚಿಮ ಬಂಗಾಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಿದರು.
ಪ್ರಣಯಮೂರ್ತಿ, ಗೋಪಿ ಚಂದ್, ಶಿವಪ್ಪ ಕುಡ್ಲೂರ್, ಓಂಕಾರ ಶ್ರೀ ಇದ್ದರು.