ಗ್ರಾಪಂ ಗ್ರಂಥಾಲಯಗಳ ಮೇಲೆ ನಿಗಾವಹಿಸಿ

Sirwara Meeting
ಸಿರವಾರದ ತಾಪಂ ಕಚೇರಿಯಲ್ಲಿ ಗ್ರಾಪಂ ಪಿಡಿಒ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹಾಗೂ ಗ್ರಂಥಪಾಲಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಮಾತನಾಡಿದರು. ತಾಪಂ ಇಒ ಶಶಿಧರ್ ಸ್ವಾಮಿ, ಸಹಾಯಕ ನಿರ್ದೇಶಕ ಮಂಜುನಾಥ ಜಾವೂರ, ಕೌಶಲ್ ಪಾಟಕ್, ವಿಶಾಲ ಪಾಟೀಲ್ ಇದ್ದರು.
Published on

ಸಿರವಾರ: ಪಿರಾಮಲ್ ಫೌಂಡೇಷನ್ ಮೂಲಕ ಗ್ರಾಪಂಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಬ್ಲಾಕ್ ಮಟ್ಟದಲ್ಲಿ ಸಮಿತಿ ರಚನೆ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.

ಪಟ್ಟಣದ ತಾಪಂ ಕಚೇರಿಯಲ್ಲಿ ಶುಕ್ರವಾರ ಪಿರಾಮಲ್ ಫೌಂಡೇಷನ್‌ನಿಂದ ಗ್ರಾಪಂ ಪಿಡಿಒ, ಕ್ಲರ್ಕ್ ಕಂ ಡೇಟಾ ಎಂಟ್ರಿ ಆಪರೇಟರ್ ಹಾಗೂ ಗ್ರಂಥಪಾಲಕರಿಗೆ ಗ್ರಾಪಂ ಅಭಿವೃದ್ಧಿ ಯೋಜನೆ ಕುರಿತು ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

15ನೇ ಹಣಕಾಸಿನ ಯೋಜನೆ ಹಾಗೂ ಗ್ರಾಪಂ ಪ್ಲಾನಿಂಗ್ ಮತ್ತು ಫೆಸಿಲಿಟೇಶನ್ ಟೀಮ್ ಯೋಜನೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಸಹಕಾರಿಯಾಗಲಿದೆ. ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಇರುವ ಗ್ರಂಥಾಲಯಗಳ ಮೇಲೆ ಇಒ ಹಾಗೂ ಎಡಿಗಳು ನಿಗಾವಹಿಸಬೇಕು.

ಗ್ರಂಥಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರಿಗಾಗಿ ಸ್ಪರ್ಧಾತ್ಮಕ ಪುಸ್ತಕಗಳನ್ನು ತರಿಸಬೇಕು. ಪಂಚಾಯಿತಿಗಳಲ್ಲಿ ಪುಸ್ತಕ ಗೂಡು ಕೇಂದ್ರ ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಓದುವ ಹವ್ಯಾಸ ಹೆಚ್ಚಿಸಬೇಕು ಎಂದರು.

ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಣ ಇಲಾಖೆಯ ಸಂಪನ್ಮೂಲಗಳ ವ್ಯಕ್ತಿಗಳು ಹಾಗೂ ಪಿಡಿಒಗಳು ಜಂಟಿಯಾಗಿ ಜನಜಾಗೃತಿ ಮೂಡಿಸಬೇಕು. ಜ.26ರೊಳಗೆ ಬಾಕಿಯಿರುವ ಆಸ್ತಿ ತೆರಿಗೆ ಸಂಗ್ರಹ ಮಾಡಬೇಕುಎಂದು ಸೂಚಿಸಿದರು.

ತಾಪಂ ಇಒ ಶಶಿಧರ್ ಸ್ವಾಮಿ, ಎಡಿ ಮಂಜುನಾಥ ಜಾವೂರ, ಪಿರಾಮಲ್ ಫೌಂಡೇಷನ್‌ನ ಕೌಶಲ್ ಪಾಟಕ್, ವಿಶಾಲ ಪಾಟೀಲ್, ಅನಿಲ್ ಕುಮಾರ ರೆಡ್ಡಿ, ಸೂರ್ಯ, ಜ್ಞಾನಸುಂದರಿ, ಪ್ರವೀಣ ಹಾಗೂ ಪಿಡಿಒಗಳು, ಸಿಆರ್‌ಪಿಎಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net