ದ್ವಿತೀಯ ಪಿಯುಸಿಯಲ್ಲಿ ಮೋನಿಷಾಗೆ ಶೇ.94 ಫಲಿತಾಂಶ

MONISHA PU
ಮೋನಿಷಾ
Published on

ತಿ.ನರಸೀಪುರ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣದ ವಿದ್ಯೋದಯ ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಂ.ಮೋನಿಷಾ ಶೇ.94ರಷ್ಟು ಅಂಕ ಪಡೆಯುವುದರ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಒಟ್ಟು 600 ಅಂಕಗಳಿಗೆ 564 ಅಂಕ ಪಡೆದು ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಜೀವಶಾಸ್ತ್ರ ವಿಷಯದಲ್ಲಿ 100ಕ್ಕೆ ಗರಿಷ್ಠ 98 ಅಂಕ ಪಡೆದಿದ್ದಾಳೆ. ಈಕೆ ಪಟ್ಟಣದ ವಿವೇಕಾನಂದ ನಗರದ ನಿವಾಸಿ ಟೆಂಪೋ ಎನ್.ಮಹೇಶ್, ದಿವ್ಯಾ ದಂಪತಿ ಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net