

ಮಡಿಕೇರಿ:
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಬಿಎಸ್‌ಸಿ ಸೂಕ್ಷಾö್ಮಣು ಜೀವಶಾಸ್ತçದ ಅಂತಿಮ ಪದವಿ ಪರೀಕ್ಷೆಯಲ್ಲಿ ಮಡಿಕೇರಿಯ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜು ವಿದ್ಯಾರ್ಥಿನಿ ಸಿ.ಎಸ್. ಮೋನಿಶಾ ರೈ ಮೊದಲ ರ‍್ಯಾಂಕ್ ಗಳಿಸಿ ಕಾರ್ಮೈನ್ ಲೋಬೋ ಚಿನ್ನದ ಪದಕ ಪಡೆದಿದ್ದಾರೆ. ಇತ್ತೀಚೆಗೆ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ 43ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೋನಿಶಾ ರೈಗೆ ಪದಕ ಪ್ರದಾನ ಮಾಡಲಾಯಿತು.
ಸಿ.ಎಸ್. ಮೋನಿಶಾ ರೈ ಕುಶಾಲನಗರ ತಾಲೂಕು ಹಾರಂಗಿ ಸಮೀಪದ ಚಿಕ್ಕತ್ತೂರು ಗ್ರಾಮದ ಬೈಲಾಡಿ ಕುಟುಂಬದ ಶಿವಾನಂದ ರೈ ಹಾಗೂ ಗುಣವತಿ ರೈ ದಂಪತಿಯ ಪುತ್ರಿ.