ಜಾಗತಿಕ ಸಾಂಸ್ಕೃತಿಕ ಉತ್ಸವದಲ್ಲಿ ಮಂಗೋಲಿಯಾ ವಿಶೇಷತೆ ಅನಾವರಣ

IMG-20250829-WA0029.jpg
Published on

ಚಿಕ್ಕಬಳ್ಳಾಪುರ: ಸಮಾಜದ ಹಿತದೃಷ್ಟಿಯಿಂದ ಎಲ್ಲ ಧರ್ಮೀಯರು ಒಗ್ಗೂಡಿ ಕೆಲಸ ಮಾಡಬೇಕು. ಆಗ ಮಾತ್ರ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಹಬಾಳ್ವೆಯನ್ನು ಸಾಧಿಸಬಹುದು ಎಂದು ಮಂಗೋಲಿಯಾದ ಉಲಾನ್ ಬಾತರ್‌ನಲ್ಲಿರುವ ದಶಿಚೋಲಿಂಗ್ ಧಾರ್ಮಿಕ ಪಾಠಶಾಲೆಯ ಮುಖ್ಯಸ್ಥ ಖಂಬಾ ಲಾಮಾ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಕೈಗೊಂಡಿದ್ದ 'ಜಾಗತಿಕ ಸಾಂಸ್ಕೃತಿಕ ಉತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. 
ಅಧ್ಯಾತ್ಮಿಕ ವಿಚಾರದಲ್ಲಿ ಭಾರತ ಮತ್ತು ಮಂಗೋಲಿಯಾ ಜನರು ಒಡ ಹುಟ್ಟಿದವರಂತೆ ಇದ್ದು ಬೌದ್ಧ ಧರ್ಮದ ಕಾರಣದಿಂದ ಐತಿಹಾಸಿಕ ಸಂಬಂಧ ಹೊಂದಿವೆ. ಸಂಸ್ಕೃತಿ ಹಾಗೂ ಬೆಳವಣಿಗೆಗೆ ವಿಶಿಷ್ಟ ಕೊಡುಗೆ ನೀಡಿವೆ ಎಂದು ಸ್ಮರಿಸಿದರು.
ಮಂಗೋಲಿಯಾದ ರಾಯಭಾರಿ ಎಚ್.ಇ. ಗ್ಯಾನ್ ಬೋಲ್ಡ್ ಡಂಬಜಾವ್ ಮಾತನಾಡಿ, 1955 ರಲ್ಲಿ ಭಾರತ ಮತ್ತು ಮಂಗೋಲಿಯಾದ ರಾಜತಾಂತ್ರಿಕ ಸಂಬಂಧಗಳು ಶುರುವಾಗಿದ್ದು ರಾಜಕೀಯ, ಆರ್ಥಿಕತೆ, ರಕ್ಷಣೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಪಾಲುದಾರಿಕೆ ಮುಂದುವರಿದಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಮಂಗೋಲಿಯಾದ ಡಾ ಬಯಾರಾ ಡಾಂಜಿನ್ ಹಾಗೂ ಡುಗರ್ ಜಾವ್ ತ್ಸೆಟ್ಸೆಗ್ಮಾಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ ಹಾಗೂ ಎಎಸ್ಎಂ ಟೆಕ್ನಾಲಜಿ ಕಂಪನಿಯ ಅಧ್ಯಕ್ಷೆ ಪ್ರೀತಿ ರವೀಂದ್ರಾ ಹಾಗೂ ಕಾರ್ಯದರ್ಶಿ ವಾಣಿಶ್ರೀ ಪ್ರಶಸ್ತಿಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ 2025 ಪುರಸ್ಕಾರವನ್ನು ನೀಡಲಾಯಿತು.

*ಕೈತಪ್ಪಿ ಹೋಗಿದ್ದಕ್ಕೆ ಪರಿತಪರಿಸುವುದೇಕೆ?
'ಅಷ್ಟಾವಕ್ರಗೀತೆ' ಉಪನ್ಯಾಸ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, 'ಪ್ರಕೃತಿ, ದೇವರು ಸೇರಿದಂತೆ ಯಾವುದೂ ಸಹ ಬೇರೆ ಬೇರೆ ಅಲ್ಲ. ಎಲ್ಲವೂ ಒಂದೇ. ಇದನ್ನು ಅರ್ಥೈಸಿಕೊಂಡವರು ಅನ್ಯರಿಗೆ ನೋವು ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
'ಗಣೇಶ ಹಬ್ಬ ಇಲ್ಲವೇ ಯಾವುದೇ ಹಬ್ಬದ ಸಂದರ್ಭದಲ್ಲಿ ಪೂಜೆ ಆರಂಭಿಸುವ ಮೊದಲು ಸಿದ್ಧತೆ ಅಗತ್ಯ. ಆದರೆ, ಕೆಲವೊಮ್ಮೆ ಯಾವುದಾದರೂ ಒಂದು ವಸ್ತು ತಪ್ಪಿ ಹೋದರೂ ಕೆಲವರಿಗೆ ಚಿಂತೆ ಕಾಡುತ್ತದೆ. ಮನಸ್ಸಿಗೆ ಶಾಂತಿ ಎಂಬುದೇ ಇರುವುದಿಲ್ಲ. ಪೂಜೆಗಿಡಬೇಕಾದ ಒಂದು ಹಣ್ಣು ತಪ್ಪಿಹೋಗಿದ್ದಕ್ಕೆ ಅವರು ತಾಳ್ಮೆಯನ್ನೇ ಕಳೆದುಕೊಳ್ಳುತ್ತಾರೆ. ಕಣ್ಣೆದುರು ಇರದ ಹಣ್ಣಿನ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಅದು ಪೂಜೆಗೆ ಬಾಧಕವಾಗಬೇಕೇ' ಎಂದು ಅವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net