ಹಣ ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಆನ್​ಲೈನ್​ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ನರಗುಂದ ತಾಲೂಕಿನ ಕುರಗೋವಿಂದಕೊಪ್ಪ ಶಿವಕುಮಾರ ಕೆ. ಎಂಬುವರ ಖಾತೆಯಿಂದ ಆನ್​ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಫೇಸ್​ಬುಕ್ ಖಾತೆಗೆ ವೆಬ್​ಲಿಂಕ್ ಕಳುಹಿಸಿ ಹಣ ಹೂಡಿಕೆ ಮಾಡುವಂತೆ ಅಪರಿಚಿತರು ಕೇಳಿಕೊಂಡಿದ್ದಾರೆ. ನಂತರ ಹಂತ ಹಂತವಾಗಿ 2,21,671 ರೂ. ಹಣ ವರ್ಗಾಯಿಸಿಕೊಂಡು, ಮರಳಿ ಕೊಡದೇ ವಂಚಿಸಿದ್ದಾರೆ. ಕೆಲ ಬ್ಯಾಂಕ್​ಗಳು ಹುಬ್ಬಳ್ಳಿಯಲ್ಲಿ ಇರುವುದರಿಂದ ಶಿವಕುಮಾರ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net