

ಕಳಸ: ತಾಲೂಕಿನ ಮೈದಾಡಿ, ಮರಸಣಿಗೆ, ಕ್ವಾಸಿಕ್ ಎಸ್ಟೇಟ್, ಸಂಸೆ, ಗುತ್ಯಡ್ಕ ಮುಂತಾದ ಭಾಗಗಳಲ್ಲಿ ಅಡಕೆ ಮರಗಳಿಗೆ ಡ್ರೋಣ್ ಮೂಲಕ ಔಷಧ ಸಿಂಪಡಣೆ ಮಾಡಲಾಗಿದೆ.
ಎರಡು ವರ್ಷಗಳ ಹಿಂದೆ ಅಡಕೆ ಮರಗಳಿಗೆ ವಿಚಿತ್ರ ರೋಗ ತಗುಲಿ ಸಂಪೂರ್ಣ ತೋಟಗಳು ಸುಟ್ಟು ನಾಶವಾಗುತ್ತಿದ್ದವು. ಈ ರೋಗ ಶೀತ ಪ್ರದೇಶದಲ್ಲಿ ವೇಗವಾಗಿ ತೋಟದಿಂದ ಇನ್ನೊಂದು ತೋಟಕ್ಕೆ ಹರಡಲು ಆರಂಭವಾಯಿತು. ಕೇಂದ್ರ ಮತ್ತು ರಾಜ್ಯ ವಿಜ್ಞಾನಿಗಳ ತಂಡ ಪರಿಶೀಲಿಸಿ ಅಡಕೆ ಗಿಡಗಳಿಗೆ ಸಾಮೂಹಿಕವಾಗಿ ಔಷಧ ಸಿಂಪಡಣೆ ಮಾಡಬೇಕು. ಅಲ್ಲದೆ ಗಿಡಗಳ ಗರಿಗಳಿಗೂ ಸಿಂಪಡಣೆ ಮಾಡಿದರೆ ಮಾತ್ರ ರೋಗ ಹತೋಟಿಗೆ ತರಬಹುದು ಎಂದು ರೈತರಿಗೆ ಮಾಹಿತಿ ನೀಡಿದ್ದರು.
ಆದರೆ ಅಡಕೆ ಮರದ ಗರಿಗಳಿಗೆ ಔಷಧ ಸಿಂಪಡಣೆ ಮಾಡಲು ಕಷ್ಟ ಸಾಧ್ಯವಾಗಿತ್ತು. ಇದಕ್ಕಾಗಿ ಸಂಸೆ ಭಾಗದ ಪ್ರಸನ್ನ ಹೆಬ್ಬಾರ್ ಮತ್ತು ಕ್ಲಾಸಿಕ್ ಎಸ್ಟೇಟ್ ತೋಟದ ಮಾಲೀಕರು ಡ್ರೋಣ್ ಮೂಲಕ ಅಡಕೆ ಗಿಡಗಳಿಗೆ ಔಷಧ ಸಿಂಪಡನೆ ಮಾಡಿದ್ದಾರೆ.