ಹುಂಡಿ ಹಣ ಕಳವು

06 Nandagudi 1 Hundi
Published on

ನಂದಗುಡಿ ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಾಲಯದಲ್ಲಿ ಶುಕ್ರವಾರ ತಡ ರಾತ್ರಿ ಬೀಗ ಒಡೆದು ಹುಂಡಿ ಹಣ ದೋಚಲಾಗಿದೆ. ದೇವಾಲಯದ ಬೀಗ ಒಡೆದು ಒಳ ನುಗ್ಗಿರುವ ಕಳ್ಳರು ಹುಂಡಿಯನ್ನು ಕದ್ದೊಯ್ದು ಗ್ರಾಮದ ಹೊರವಲಯದ ನೀಲಗಿರಿ ತೋಪಿನಲ್ಲಿ ಒಡೆದು ನಗದು ದೋಚಿದ್ದು, ತೋಪಿನಲ್ಲಿ ಖಾಲಿ ಹುಂಡಿ ಪತ್ತೆಯಾಗಿದೆ. ನಂದಗುಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net