

ಕನಕಗಿರಿ: ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಒತ್ತಾಯಿಸಿ ಸ್ಥಳೀಯ ಕಾರ್ಮಿಕ ಹಾಗೂ ಬಾರ್ ಬೈಡಿಂಗ್ ಸೇಟ್ರಿಂಗ್ ಕ್ಷೇಮಾಭಿವೃದ್ಧಿ ಸಂಘವು ತಹಸೀಲ್ದಾರ್ ರವಿ ಅಂಗಡಿ ಸೋಮವಾರ ಮನವಿ ಸಲ್ಲಿಸಿತು.
ಸಂಘದ ಅಧ್ಯಕ್ಷ ಮಹ್ಮಮದ್ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಜೀವನ ನಡೆಸುವುದು ತೊಂದರೆಯಾಗಿದೆ. ರಾಜ್ಯ ಸರ್ಕಾರವು ಇತ್ತಿಚೆಗೆ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಹಾಕುವುದಾಗಿ ಹೇಳಿದೆ. ಆದರೆ, ಪಟ್ಟಣದ ಶೇ.75ರಷ್ಟು ಕಾರ್ಮಿಕರ ಖಾತೆಗೆ ಹಣ ಜಮಾ ಆಗಿಲ್ಲ ಎಂದರು. ಕಾರ್ಮಿಕ ಸಂಘದ ಪದಾಧಿಕಾರಿಗಳಾದ ವೀರೇಶ ಮೋಚಿ, ಮಹ್ಮದ ಎಲಿಗಾರ, ಸಿಂಧು ಬಲ್ಲಾಳ, ಖಾದರ ಪಾಷಾ, ಚನ್ನಬಸವ, ಹುಸೇನ, ಶ್ಯಾಮೀದ್‌ಸಾಬ ಇತರರು ಇದ್ದರು.