ಕಾಮಗಾರಿಗೆ ಬಿಡುಗಡೆಯಾಗುತ್ತಿಲ್ಲ ಹಣ

Byd strike
Published on

ಬ್ಯಾಡಗಿ: ಕಾಂಗ್ರೆಸ್ ಸರ್ಕಾರದ ಶೂನ್ಯ ಅಭಿವೃದ್ಧ್ದಿಗೆ ಬೇಸತ್ತು ಕ್ಷೇತ್ರದ ಮತದಾರರು ಲೋಕಸಭೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಬಿಜೆಪಿಯನ್ನೇ ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದರು.

ಹಳೇ ಪುರಸಭೆ ಎದುರು ತಾಲೂಕು ಬಿಜೆಪಿ ಘಟಕದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಹೊಸ ಹೊಸ ಪಾಲಿಸಿ ಮೂಲಕ ಇಂಧನ ಬೆಲೆ ಏರಿಕೆ, ಆಸ್ತಿ ಖರೀದಿ ಶುಲ್ಕ , ಇತ್ಯಾದಿ ತೆರಿಗೆ ಹೆಚ್ಚಳ ಮಾಡುತ್ತಿದ್ದು, ಮತದಾರರಿಗೆ ಈಗ ಅರಿವಾಗುತ್ತಿದೆ. ಬಡವರಿಗೆ ಆರ್ಥಿಕ ಸಹಕಾರ ನೀಡಲು ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವೆ ಎನ್ನುವುದು ಕೇವಲ ಭಾಷಣವಷ್ಟೆ. ತಾಲೂಕಿನಲ್ಲಿ ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರಕ್ಕೆ ಆಗುತ್ತಿಲ್ಲ, ಕಾಮಗಾರಿಗಳನ್ನು ಅಪೂರ್ಣಗೊಳಿಸಲಾಗಿದ್ದು, ಉಳಿದ ಕಾಮಗಾರಿಗೆ ಹಣ ಬಿಡುಗಡೆಯಾಗುತ್ತಿಲ್ಲ ಎಂದರು.

ಬಿಜೆಪಿ ಘಟಕದ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ಗವಿಶಿದ್ದಪ್ಪ ದ್ಯಾಮಣ್ಣನವರ, ಮುರಿಗೆಪ್ಪ ಶೆಟ್ಟರ, ವಿಜಯ ಬಳ್ಳಾರಿ, ಶಿವಬಸಪ್ಪ ಕುಳೇನೂರು, ರಾಜು ಹೊಸಕೇರಿ, ಚಂದ್ರಪ್ಪ ಶೆಟ್ಟರ, ವಿನಯ ಹಿರೇಮಠ, ವಿದ್ಯಾಶೆಟ್ಟಿ, ಪದ್ಮಾವತಿ ಯೋಗಿ, ಸರೋಜ ಉಳ್ಳಾಗಡ್ಡಿ, ಜೀತೇಂದ್ರ ಸುಣಗಾರ, ನಾಗರಾಜ ಹಾವನೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net