

ಹಾವೇರಿ: ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ದಿನವೊಂದಕ್ಕೆ ಶೇ. 2ರಷ್ಟು ಲಾಭ ನೀಡಲಾಗುವುದು ಎಂದು ನಂಬಿಸಿ ಎಲೆಕ್ಟ್ರೀಕಲ್ ಇಂಜಿನಿಯರ್‌ರೊಬ್ಬರಿಗೆ ಬರೋಬ್ಬರಿ 29 ಲಕ್ಷ ರೂ. ಮೋಸ ಮಾಡಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರ ತಾಲೂಕಿನ ಕಜ್ಜರಿ ಗ್ರಾಮದ ಅಣ್ಣಪ್ಪ ರಾಮಪ್ಪ ನಾಯಕ (30) ಮೋಸ ಹೋದವರು.
ಇವರಿಗೆ ಫೋನ್ ಮಾಡಿದ ವ್ಯಕ್ತಿ ಬ್ಲೂಸ್ಟೋನ್ ಇಕ್ವಿಟ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದಿನಕ್ಕೆ ಶೇ. 2ರಷ್ಟು ಬಡ್ಡಿ ನೀಡಲಾಗುವುದು ಎಂದು ನಂಬಿಸಿ ಮೊದಲಿಗೆ 10 ಸಾವಿರ ರೂ. ಹಾಕಿಸಿಕೊಂಡಿದ್ದಾನೆ. ಅದಕ್ಕೆ ಪ್ರತಿಯಾಗಿ 11 ಸಾವಿರ ರೂ.ಅನ್ನು ವಾಪಸ್ ಕೊಟ್ಟು ವಿಶ್ವಾಸ ಗಿಟ್ಟಿಸಿಕೊಂಡಿದ್ದಾನೆ. ನಂತರ 29.58 ಲಕ್ಷ ರೂ. ಹಾಕಿಸಿಕೊಂಡು ಹಣ ವಾಪಸ್ ನೀಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.