ಹಣ ನೀಡಿದವರಿಗೆ ಮನೆ ಮಂಜೂರು

05 YLB 01
ಹಿರೇವಂಕಲಕುಂಟಾ ಗ್ರಾಪಂನಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಮಂಜುನಾಥ ಶಾಸ್ತ್ರಿ ಸದಸ್ಯರಾದ ಹಿರೇಮಠ, ಆನಂದ ಈಳಿಗೇರ, ರೇಣುಕಾ ಮಾಟ್ರಂಗಿ, ಪಾರ್ವತಿ ವಾಲ್ಮೀಕಿ, ನಿಂಗಪ್ಪ ತೋಣಶಿಹಾಳ, ಶಿವಮ್ಮ ಓಜನಹಳ್ಳಿ, ಹುಸೇನ್ ಬಿ ಅತ್ತಾರ, ಮಾಹಲಿಂಗಪ್ಪ ಗುಡದೂರು, ಹನಮವ್ವ ಗಂಗನಾಳ, ಹುಲಿಗೆಮ್ಮ ಹರಿಜನ ಇತರರಿದ್ದರು.
Published on

ಯಲಬುರ್ಗಾ: ಬಸವ ವಸತಿ ಯೋಜನೆಯಡಿ ಹಣ ನೀಡಿದವರಿಗೆ ಮನೆಗಳನ್ನು ಮಂಜೂರು ಮಾಡಿದ್ದು, ಇವುಗಳ ಬಿಲ್ ತಡೆಹಿಡಿದು ಅರ್ಹರಿಗೆ ಒದಗಿಸಬೇಕೆಂದು ಗ್ರಾಪಂ ಸದಸ್ಯೆ ಶಿವಮ್ಮ ಗಾಳೆಪ್ಪ ಓಜನಹಳ್ಳಿ ಒತ್ತಾಯಿಸಿದರು.

ತಾಲೂಕಿನ ಹಿರೇವಂಕಲಕುಂಟಾ ಗ್ರಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಬಸವ ವಸತಿ ಯೋಜನೆಯಡಿ 150 ಮನೆಗಳಲ್ಲಿ 36ಮನೆಗಳನ್ನು ಗ್ರಾಮ ಸಭೆ ನಡೆಸದೇ ಮಂಜೂರು ಮಾಡಲಾಗಿದೆ.

ಹೀಗಾಗಿ ಇವುಗಳ ಜಿಪಿಎಸ್ ಮಾಡಿ ಬಿಲ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಬಹುತೇಕ ಸದಸ್ಯರು ಸಮ್ಮತಿ ಸೂಚಿಸಿದರು. ಆಕ್ಷೇಪ ವ್ಯಕ್ತಪಡಿಸಿದ ಕೆಸ ಸದಸ್ಯರು, ವಾರ್ಡ್‌ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ತಿರ್ಮಾನಿಸಿಯೇ ಆಯ್ಕೆ ಮಾಡಲಾಗಿದೆ. ಫಲಾನುಭವಿಗಳಿಂದ ಹಣ ಪಡೆದಿಲ್ಲ. ಇದು ಆಧಾರ ರಹಿತ ಆರೋಪ ಎಂದು ದೂರಿದರು.

150 ಮನೆಗಳಲ್ಲಿ ಬರಿ 36ಮನೆಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 114ಮನೆಗಳನ್ನು ಸದಸ್ಯರಿಗೆ ಹಂಚಿಕೆ ಮಾಡಬೇಕೆಂದು ಗ್ರಾಪಂ ಸದಸ್ಯೆ ಪಾರ್ವತಿ ವಾಲ್ಮೀಕಿ ಒತ್ತಾಯಿಸಿದರು. ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳು ಸಕಾಲದಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು.

ಜಿಪಿಎಸ್ ಆದ ನಂತರ 4 ಹಂತಗಳಲ್ಲಿ ವಸತಿ ನಿಗಮದಿಂದ ಹಣ ಫಲಾನುಭವಿ ಖಾತೆಗಳಿಗೆ ನೇರವಾಗಿ ಬಿಡುಗಡೆಯಾಗಲಿದೆ ಎಂದು ಅಭಿವೃದ್ಧಿ ಅಧಿಕಾರಿ ಹನುಮಪ್ಪ ರೇಣಿ ಸಭೆಗೆ ತಿಳಿಸಿದರು. ಯಾಪಲದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಡೆಗೋಡೆಗೆ 5.60 ಲಕ್ಷ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುವುದು.

2025-2026 ಸಾಲಿನಲ್ಲಿ 15ನೇ ಹಣಕಾಸಿನ ನಿರ್ಬಂಧಿತ ಅನಿರ್ಬಂಧಿತ ಅನುದಾನದ ಕ್ರೀಯಾಯೋಜನೆಗೆ ಸರ್ವ ಸದಸ್ಯರು ಅನುಮೋದನೆ ನೀಡಿದರು. ಉಪಾಧ್ಯಕ್ಷ ಮಂಜುನಾಥ ಶಾಸ್ತ್ರಿ, ಸದಸ್ಯರಾದ ಹಿರೇಮಠ, ಆನಂದ ಈಳಿಗೇರ, ರೇಣುಕಾ ಮಾಟ್ರಂಗಿ, ಪಾರ್ವತಿ ವಾಲ್ಮೀಕಿ, ನಿಂಗಪ್ಪ ತೋಣಶಿಹಾಳ, ಶಿವಮ್ಮ ಓಜನಹಳ್ಳಿ, ಹುಸೇನ್ ಬಿ ಅತ್ತಾರ, ಮಾಹಲಿಂಗಪ್ಪ ಗುಡದೂರು, ಹನಮವ್ವ ಗಂಗನಾಳ, ಹುಲಿಗೆಮ್ಮ ಹರಿಜನ, ಕುಂಟೆಪ್ಪ ಚಿಣಗಿ, ಶರಣಪ್ಪ ಹರಿಜನ, ಶಾರದಾ ಗೌಡ್ರು, ಶಿವಮೂರ್ತಿ ಹರಿಜನ ಕಲ್ಲೇಶ ನವಲಹಳ್ಳಿ, ಕಾರ್ಯದರ್ಶಿ ಶಿವಪ್ಪ ಪುರ್ತಗೇರಿ ಬಿಲ್ ಕಲೇಕ್ಟರ ಬಸಯ್ಯಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net