

ಬೆಳಗಾವಿ : ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡಿ ಹಣ ಹಂಚಿದರೂ ಕ್ರಮ ಕೈಗೊಳ್ಳುವಲ್ಲಿ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ವಿಫಲವಾಗಿದೆ ಎಂದು ಚ್ಕಿಕೋಡಿಯ ಅಪ್ಪಾಸಾಹೇಬ ಕುರಣೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಚಿಕ್ಕೋಡಿ-ಸದಲಗಾ ಕ್ಷೇತ್ರದ ಭೂತ್ 1 ರಿಂದ 224ರ ಎಲ್ಲ ಮತದಾರರಿಗೆ ತಮ್ಮ ಅಭ್ಯರ್ಥಿಗೆ ಮತದಾನ ಮಾಡುವಂತೆ ಬಿಜೆಪಿಯಿಂದ ಒಂದು ಸಾವಿರ ರೂ. ಹಾಗೂ ಕಾಂಗ್ರೆಸ್‌ನಿಂದ 1,500 ರೂ.ಆಮಿಷೊಡ್ಡಿ ನೀಡುತ್ತಿರುವ ಬಗ್ಗೆ ಮೇ.9ರಂದೇ ದೂರು ನೀಡಿದರೂ, ಕಾನೂನು ಕ್ರಮ ಜರುಗಿಸಿ ಅದನ್ನು ತಡೆಗಟ್ಟುವಲ್ಲಿ ಚುನಾವಣಾಧಿಕಾರಿಗಳು ವಿಫಲವಾಗಿದ್ದಾರೆ. ಆ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಚುನಾವಣಾ ಆಯೋಗ ಸಂಪೂರ್ಣ ವಿಫಲವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಿಸಿ, ಕಠಿಣ ಕ್ರಮ ಜರುಗಿಸವಂತೆ ಒತ್ತಾಯಿಸಿದ್ದಾರೆ.
ಚುನಾವಣೆಗೂ ಮುನ್ನವೇ ಗಿಫ್ಟ್ ಫಾಲಿಟಿಕ್ಸ್ ಮೊರೆ ಹೋಗಿದ್ದ ಅಭ್ಯರ್ಥಿಗಳ ವಿರುದ್ಧ ಚುನಾವಣಾಧಿಕಾರಿಗಳು ನೀತಿ ಸಂಹಿತೆಜಾರಿಗೂ ಮುನ್ನವೇ ಕಾರ್ಯಾಚರಣೆ ಆರಂಭಸಿದ್ದರೂ, ಕತ್ತಲರಾತ್ ಕರಾಮತ್ತು ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.