

ಮೈಸೂರು: ಪ್ರಸ್ತುತ ಕಾಲಘಟ್ಟದಲ್ಲಿ ಜ್ಞಾನದ ಶಿಕ್ಷಣ ಕಣ್ಮರೆಯಾಗುತ್ತಿದ್ದು, ಹಣದ ಶಿಕ್ಷಣ ಚಾಲ್ತಿಂುಲ್ಲಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ವಿಷಾಧಿಸಿದರು.
ಮೈಸೂರು ವಿಶ್ವವಿದ್ಯಾನಿಲಂು, ಪ್ರಾಚ್ಯವಿದ್ಯಾ ಸಂಶೋಧನಾಲಂು, ಕೇಂದ್ರೀಂು ಸಂಸ್ಕ ೃತ ವಿಶ್ವವಿದ್ಯಾಲಯ, ಶ್ರೀ ವ್ಯಾಸತೀರ್ಥ ಸಂಶೋಧನಾ ಪ್ರತಿಷ್ಠಾನಮ್‌ನಿಂದ ವಾನಸಗಂಗೋತ್ರಿಂು ವಿಜ್ಞಾನ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಬ್ಧ ಕೌಸ್ತುಭ, ಗೃಹನಿಧಿ, ಶ್ರೀವಿದ್ಯಾ ಸಂಕೀರ್ತನ ಸುಧಾಲಹರಿ, ವಿಷ್ಣು ಸಹಸ್ರನಾಮ, ವಿಷ್ಣುಸ್ತುತಿ, ಸಂಖ್ಯಾ ರತ್ನಕೋಶ, ತತ್ವ ಚಿಂತಾಮಣಿ ಇತ್ಯಾದಿ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ವಾತನಾಡಿದರು.
ಜ್ಞಾನ ಹೆಚ್ಚಿಸಿಕೊಳ್ಳಲು ಎಲ್ಲರಿಗೂ ಶಿಕ್ಷಣ ಅಗತ್ಯವಾಗಿದೆ. ಆದರೆ, ಇಂತಹ ಶಿಕ್ಷಣ ಇಂದು ಹಣ ಗಳಿಕೆಗೆ ಮಾತ್ರ ಸೀಮಿತವಾಗುತ್ತಿದ್ದು, ಜ್ಞಾನದ ಶಿಕ್ಷಣ ಕಣ್ಮರೆಯಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ಹಣದ ಶಿಕ್ಷಣಕ್ಕಿಂತ ಗುಣಮಟ್ಟದ ಮತ್ತು ಜ್ಞಾನದ ಶಿಕ್ಷಣ ಪ್ರತಿಂೊಬ್ಬರಿಗೂ ದೊರೆಂುಬೇಕು ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನ ಎಲ್ಲೆಡೆ ವಿಸ್ತಾರಗೊಳ್ಳುತ್ತಿದ್ದು, ಅಭಿವೃದ್ಧಿಯೂ ಆಗುತ್ತಿದೆ. ಅಂತಹ ತಂತ್ರಜ್ಞಾನ ಶಿಕ್ಷಣದಲ್ಲಿಯೂ ಬಳಸಿಕೊಳ್ಳಬೇಕು. ಈ ಮೂಲಕ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರಕಬೇಕು. ಶಿಕ್ಷಣ ಕಲಿಯಲು ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲರಲ್ಲಿಂುೂ ಸಮಂುಪ್ರಜ್ಞೆ ಇರಬೇಕು ಎಂದು ಹೇಳಿದರು.
ವಿದ್ವತ್‌ಪೂರ್ಣವಾದ ಕೃತಿಗಳು ಂಾವ ತೊಂದರೆಂುೂ ಇಲ್ಲದೆ ಪ್ರಕಟಗೊಳ್ಳಬೇಕು. ಅಮೂಲ್ಯ ಕೃತಿಗಳು ಎಲ್ಲರಿಗೂ ತಲುಪಬೇಕು. ಜ್ಞಾನ ಹೆಚ್ಚಿಸಿಕೊಳ್ಳಲು ಪುಸ್ತಕಗಳು ಅಗತ್ಯವಿದ್ದು, ಪುಸ್ತಕಗಳನ್ನು ಓದು ಹವ್ಯಾಸ ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿ ವಾತನಾಡಿ, ಜ್ಞಾನ ಮತ್ತು ಶಾಸ ಪರಂಪರೆ ನಿರಂತರವಾಗಿ ಮುಂದುವರೆಂುುತ್ತದೆ. ಆದ್ದರಿಂದ ಶುದ್ಧ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಹದ ಬೆಳವಣಿಗೆಗೆ ಪೂರಕವಾದ ಆಹಾರಗಳನ್ನು ಸೇವಿಸುವಂತೆ, ಮನಸ್ಸಿನ ಬೆಳವಣಿಗೆ ಪೂರಕವಾದ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಭಾರತೀಂು ಸಂಸ್ಕ ೃತಿಂು ಜ್ಞಾನ ಪರಂಪರೆಂುನ್ನು ತಿಳಿಸುವ ಕೆಲಸ ಕಾಂರ್ುವನ್ನು ಎಲ್ಲಾ ವಿಶ್ವವಿದ್ಯಾಲಂು ಮತ್ತು ಶಿಕ್ಷಣ ಸಂಸ್ಥೆಗಳು ವಾಡಬೇಕು ಎಂದು ತಿಳಿಸಿದರು.
ಕೇಂದೀಂು ಸಂಸ್ಕ ೃತ ವಿವಿಂು ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ವಾತನಾಡಿ, ಪ್ರಸ್ತುತ ಆಳುವ ಸರ್ಕಾರಗಳಿಗೆ ಮೈಸೂರು ರಾಜಮನೆತನದ ರಾಜರು ಕೈಗೊಂಡ ಅಭಿವೃದ್ಧಿ ಕೆಲಸಗಳು, ಸಾಂಸ್ಕ ೃತಿಕ ಕಾಂರ್ುಕ್ರಮಗಳು ಆದರ್ಶವಾಗಬೇಕು. ಐದು ವರ್ಷಗಳ ಕಾಲ ಅಧಿಕಾರದಲ್ಲಿ ಇರುವ ರಾಜಕಾರಣಿಗಳು ಐವತ್ತು ವರ್ಷಗಳ ಕಾಲ ಉಳಿಂುುವ ಕೆಲಸ ಕಾಂರ್ುಗಳನ್ನು ವಾಡಬೇಕು ಎಂದು ತಿಳಿಸಿದರು.
ನಮ್ಮಲ್ಲಿ ಉಪಲಬ್ಧ ಇರುವ ಸಂಪತ್ತು ಮೌಲ್ಯಂುುತವಾಗಿ ಉಳಿಂುಬೇಕಾದರೆ ಅವುಗಳು ಂುುಗಾನುಕೂಲವಾಗಬೇಕು. ಸರ್ಕಾರ, ಸವಾಜ, ವಿವಿಧ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ವಿಜ್ಞಾನದ ಸಂಸ್ಥೆಗಳು ಎಲ್ಲವೂ ಒಟ್ಟಾಗಿ ಪ್ರಾಚೀನ ಜ್ಞಾನ ಸಂಪತ್ತನ್ನು ಉಳಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ದಿ ಮಿಥಿಕ್ ಸೊಸೈಟಿಂು ಅಧ್ಯಕ್ಷ ವಿ.ನಾಗರಾಜ್ ವಾತನಾಡಿ, ಭಾರತೀಂು ಜ್ಞಾನ ಪರಂಪರೆಂು ಬಗ್ಗೆ ಜಗತ್ತಿನ ಜನತೆಗೆ ಬಹಳ ಆಸಕ್ತಿ ಇದೆ. ಆದ್ದರಿಂದ ಭಾರತೀಂು ಜ್ಞಾನ ಭಂಡಾರವನ್ನು ಜಗತ್ತಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಂುಬೇಕು. ಸಾಂಸ್ಕೃತಿಕ, ಸಾಹಿತ್ಯಿಕ, ಆರ್ಥಿಕ ಕ್ಷೇತ್ರಗಳಿಗೆ ಮೈಸೂರು ಅರಸು ಮನೆತನ ನೀಡಿದ ಕೊಡುಗೆ ಅವಿಸ್ಮರಣೀಂು ಎಂದರು.
ಪ್ರತಿಂೊಬ್ಬರೂ ಕೈಗೊಳ್ಳುವ ಸಾವಾಜಿಕ ಕೆಲಸ ಕಾಂರ್ುಗಳು, ಸಾಂಸ್ಕ ೃತಿಕ ಕೊಡುಗೆಗಳು ಕೆರೆಂು ನೀರನ್ನು ಕೆರೆಗೆ ಚೆಲ್ಲುವಂತೆ ಸೇವಾ ಪೂರ್ಣವಾಗಿರಬೇಕು ಎಂದು ಹೇಳಿದರು.
ಶ್ರೀ ವ್ಯಾಸರಾಜ ಮಠದ ಪೀಠಾಧ್ಯಕ್ಷ ಶ್ರೀ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಮೈಸೂರು ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಂುರ್, ಪ್ರಾಚ್ಯವಿದ್ಯಾ ಸಂಶೋಧನಾಲಂುದ ನಿರ್ದೇಶಕ ಡಾ.ಡಿ.ಪಿ.ಮಧುಸೂದನಾಚಾಂರ್ು, ಪಿಪಿಎಸ್‌ಎಂ ನಿವೃತ್ತ ನಿರ್ದೇಶಕ ಡಾ.ಎ.ವಿ.ನಾಗಸಂಪಿಗೆ, ಲೇಖಕ ಟಿ.ವಿ.ಸತ್ಯನಾರಾಂುಣ ಇತರರು ಇದ್ದರು.