

ವಿಜಯಪುರ: ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಸುಟ್ಟು ಭಸ್ಮ ಆಗಿರುಗ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಬಳಿ ತೋಟದಲ್ಲಿ ನಡೆದಿದೆ.
ಗುಡೊಸಲಿನಲ್ಲಿ ಇಟ್ಟಿದ್ದ ಐದು ಲಕ್ಷ ರೂಪಾಯಿ ನಗದು, 50ಗ್ರಾಂ ಚಿನ್ನಾಭರಣಗಳು ಸುಟ್ಟು ಕರಕಲಾಗಿವೆ. ಜೊತೆಗೆ ಟಿವಿ, ದವಸಧಾನ್ಯಗಳು, ದಿನೋಪಯೋಗಿ ವಸ್ತುಗಳು ಸಹ ಸಂಪೂರ್ಣವಾಗಿ ನಾಶವಾಗಿವೆ. ಖೇಮಪ್ಪ ಲಮಾಣಿ ಎಂಬುವವರ ಗುಡಿಸಲು ಸುಟ್ಟು ಭಸ್ಮವಾಗಿದೆ.
ಮನೆಯವರೆದುರಿಗೆ ಸುಟ್ಟ ಗುಡಿಸಲು ಕಂಡು ಖೇಮಪ್ಪ ಹಾಗೂ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಮುದ್ದೇಬಿಹಾಳ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.