ಬೇಲೂರಿನಲ್ಲಿ ಸೋಮವಾರದ ಸಂತೆ ರದ್ದು

16blrp6
Published on

ಬೇಲೂರು: ಕರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಯನ್ನು ಪುರಸಭೆ ಮತ್ತು ಆರೋಗ್ಯಾಧಿಕಾರಿ ರದ್ದುಗೊಳಿಸಿದ್ದರಿಂದ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಬಂದ ದಾರಿಗೆ ಸುಂಕ ಇಲ್ಲದಂತೆ ವಾಪಸ್ಸಾದರು.

ಬೇಲೂರು ತಾಲೂಕಿನ ಬಹುತೇಕ ಗ್ರಾಮಗಳ ಜನರು ಸೋಮವಾರದ ಸಂತೆಗೆ ಆಗಮಿಸಿ ವಾರಕ್ಕೆ ಆಗುವಷ್ಟು ತರಕಾರಿ ಹಾಗೂ ಮನೆಗೆ ಬೇಕಾದ ಸಾಮಗ್ರಿಗಳನ್ನು ಕೊಂಡುಕೊಳ್ಳುವುದು ಸಾಮಾನ್ಯ. ಆದರೆ ದೇಶಾದ್ಯಂತ ಆತಂಕ ಹುಟ್ಟಿಸಿರುವ ಕರೊನಾ ವೈರಸ್ ಭೀತಿಯಿಂದ ಪುರಸಭೆ ಮತ್ತು ಆರೋಗ್ಯಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರು ಸೇರುವ ಸಂತೆಯನ್ನು ದಿಢೀರ್ ರದ್ದುಗೊಳಿಸಿದ್ದರಿಂದ ಸಂತೆಯಲ್ಲಿ ವ್ಯಾಪಾರಕ್ಕೆಂದು ವಿವಿಧ ತಾಲೂಕುಗಳಿಂದ ಬೆಳಗ್ಗೆಯೇ ಆಗಮಿಸಿದ್ದ ವ್ಯಾಪಾರಸ್ಥರು ದಿಕ್ಕು ತೋಚದಂತಾಗಿ ತಮ್ಮೊಂದಿಗೆ ತಂದಿದ್ದ ಸಾಮಗ್ರಿಗಳೊಂದಿಗೆ ವಾಪಸ್ಸಾದರು.

ಸೋಮವಾರದ ಸಂತೆ ರದ್ದು ಆಗಿರುವ ಬಗ್ಗೆ ಮಾಹಿತಿ ಇಲ್ಲದೆ ಸಂತೆಯಲ್ಲಿ ವಿವಿಧ ಸಾಮಗ್ರಿಗಳನ್ನು ಕೊಳ್ಳಲು ಬಂದ ಗ್ರಾಮಸ್ಥರು ಸಂತೆ ನಿಲ್ಲಿಸಲು ಕಾರಣರಾದವರ ವಿರುದ್ಧ ಶಾಪ ಹಾಕುತ್ತಾ ವಾಪಸ್ಸಾಗುತ್ತಿದ್ದ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net