

ಹಾವೇರಿ: ನಗರದ ದೇಸಾಯಿ ಗಲ್ಲಿಯ ರಾಘವೇಂದ್ರ ಮಠದ ಬಾಗಿಲ ಬೀಗ ಮುರಿದು 10.67 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಬುಧವಾರ ನಡೆದಿದೆ.
ಯಾರೋ ಖದೀಮರು ಮಠದ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿದ್ದು, ಒಳಗಿನ ಕೊಠಡಿಗಳಲ್ಲಿ ಇಟ್ಟಿದ್ದ ಚಿನ್ನದ ಸರ, ಪುಷ್ಪ ಎಲೆ, ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.