ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿವೆ

Monasteries are centers of ritual offering.
ಕೆರೂರ ಸಮೀಪದ ಗಂಗನಬೂದಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಹಾದಿಬಸವೇಶ್ವರ ನೂತನ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ಗೋಪುರ ಕುಂಬಾಭೀಷೇಕ ಕಾರ್ಯಕ್ರಮಕ್ಕೆ ಕಾಡಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು, ನೀಲಲೋಹಿತ ಶ್ರೀಗಳು, ಗುರುಪಾದೇಶ್ವರ ಶ್ರೀಗಳು, ಡಾ. ಕೈಲಾಸಪತಿ ಶ್ರೀಗಳು ಚಾಲನೆ ನೀಡಿದರು. ಡಾ. ವೈ.ಎಂ ಯಾಕೊಳ್ಳಿ, ಶಿವಾನಂದ ಶೆಲ್ಲಿಕೇರಿ, ಡಾ.ಎಂ.ಜಿ. ಕಿತ್ತಲಿ, ಜಿ.ಎಸ್. ವಡಗೇರಿ ಮತ್ತಿತರರಿದ್ದಾರೆ.
Published on

ಕೆರೂರ : ಮಠ ಮಾನ್ಯಗಳು ಮನುಷ್ಯನಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ ಎಂದು ಚರಂತಿಮಠದ ಶಿವಕುಮಾರ ಶಿವಾಚಾರ್ಯ ಶ್ರೀಗಳು ಹೇಳಿದರು.

ಸಮೀಪದ ಗಂಗನಬೂದಿಹಾಳ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಮಾರುತೇಶ್ವರ ದೇವಸ್ಥಾನ ಹಾಗೂ ಹಾದಿಬಸವೇಶ್ವರ ನೂತನ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾಪನೆ ಗೋಪುರ ಕುಂಬಾಭೀಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಟ ಬಂದಾಗ ಮಾತ್ರ ದೇವರನ್ನು ನೆನೆಯದೆ, ಸದಾ ಅವನ ಸ್ಮರಿಸಿದರೆ ಏನನ್ನಾದರೂ ಸಾಧಿಸಬಹುದು ಎಂದರು.

ಎನ್.ಎನ್.ಪಾಟೀಲ ಮಾತನಾಡಿ, ಗ್ರಾಮಸ್ಥರು ಚಿಕ್ಕಬಳ್ಳಾಪೂರದಿಂದ ಶಿಲೆ ತಂದು ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಭವ್ಯ ದೇವಸ್ಥಾನದ ನಿರ್ಮಾಣಕ್ಕೆ ಕೈಜೋಡಿಸಿದ್ದು ಮಾದರಿಯಾಗಿದೆ ಎಂದರು.

ಅಪೇಕ್ಷ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಬಿ.ಎನ್. ನಾಗನ್ನವರ ಮಾತನಾಡಿ, ಗ್ರಾಮವು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಅದನ್ನು ಮುಂಚೂಣಿಗೆ ತರಬೇಕೆಂಬ ಉದ್ದೇಶ ನಮ್ಮದಾಗಿತ್ತು. ಆದರೆ, ಎಚ್.ಆರ್.ಹಿರೇಮಠ ಗುರುಗಳು ನಮ್ಮ ಬಾಲ್ಯದಲ್ಲಿ ಗುಡಿಗಳಲ್ಲಿ ಅಭ್ಯಾಸ ಮಾಡಿದ್ದನ್ನು ಪ್ರಸ್ತಾಪಿಸಿ, ಶಿಥಿಲಗೊಂಡ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಬೇಕು. ನಂತರ ಶೈಕ್ಷಣಿಕ ರಂಗಕ್ಕೆ ಕೈಹಾಕೋಣವೆಂದರು. ಅದರಂತೆ ಗ್ರಾಮಸ್ಥರ ಒಪ್ಪಿಗೆ ಪಡೆದು ಜೀರ್ಣೋದ್ಧಾರ ಪ್ರಕ್ರಿಯೆ ಕೈಗೊಳ್ಳಲಾಯಿತು. ಶಾಸಕ ಜೆ.ಟಿ. ಪಾಟೀಲರು 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಗ್ರಾಮದ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಮೊದಲ ಕಂತಿನ ಹಣವನ್ನು ನೀಡಿದ್ದು ಹಾಗೂ ಮಂಗಳೂರಿಗೆ ದುಡಿಯಲು ಹೋದ ಜನ ಆರು ಲಕ್ಷ ರೂ. ಕೂಡಿಸಿ ಕೊಟ್ಟಿದ್ದು ಅವರ ಭಕ್ತಿಯ ಪರಾಕಾಷ್ಠೆ ತೋರಿಸುತ್ತದೆ ಎಂದರು.

ಡಾ. ವೈ.ಎಂ ಯಾಕೊಳ್ಳಿ ಮಾತನಾಡಿದರು. ಗುಳೇದಗುಡ್ಡ ಮರಡಿ ಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು, ಸೋಮನಕೊಪ್ಪದ ನೀಲಲೋಹಿತ ಶ್ರೀಗಳು, ಗಂಗನಬೂದಿಹಾಳ ಪೂರ್ಣಾನಂದ ಆಶ್ರಮದ ಗುರುಪಾದೇಶ್ವರ ಶ್ರೀಗಳು, ಅನವಾಲ ಶ್ರದ್ದಾನಂದ ಮಠದ ಡಾ. ಕೈಲಾಸಪತಿ ಶ್ರೀಗಳು ಆಶೀರ್ವಚನ ನೀಡಿದರು.

ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಜಿಪಂ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಜಿ.ಎಸ್. ವಡಗೇರಿ, ಎಂ.ಎನ್. ಹೂಲಗೇರಿ, ಪಿ.ಎ್. ಕುಂದರಗಿ, ವೆಂಕಣಗೌಡ ಪಾಟೀಲ, ಬಸಲಿಂಗಪ್ಪ ಉಮತಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net