ನುಂಕೆಮಲೆ ಸಿದೇಶ್ವರ ರಥೋತ್ಸವ ರದ್ದು

MLK RADDU 03 (1)
Published on

ಮೊಳಕಾಲ್ಮೂರು: ಪಟ್ಟಣದ ಉತ್ತರ ದಿಕ್ಕಿನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ನುಂಕೆಮಲೆ ಸಿದೇಶ್ವರ ಸ್ವಾಮಿ ರಥೋತ್ಸವ ಲಾಕ್‌ಡೌನ್ ಕಾರಣಕ್ಕೆ ಭಾನುವಾರ ನಡೆಯಲಿಲ್ಲ.

ಪ್ರತಿವರ್ಷ ಏಕಾದಶಿ ಮಾಸದಲ್ಲಿ ಅದ್ದೂರಿ ಉತ್ಸವ ನಡೆಯುತ್ತಿತ್ತು. ದೇವರ ಗುಡಿಕಟ್ಟಿನ ಸ್ಥಳೀಯ ಕೆಲವು ಭಕ್ತರು ಆಗಮಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆದರು. ವರ್ಷಕ್ಕೊಮ್ಮೆ ನಡೆಯುವ ನುಂಕಪ್ಪನ ಉತ್ಸವದಲ್ಲಿ ಆಂಧ್ರ ಮತ್ತು ಕರ್ನಾಟಕದ ವಿವಿಧೆಡೆಯಿಂದ 20 ಸಾವಿರಕ್ಕೂ ಹೆಚ್ಚು ಭಕ್ತರು ಸೇರುತ್ತಿದ್ದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net