ಮೊಳಕಾಲ್ಮೂರಲ್ಲಿ ಆಕಸ್ಮಿಕ ಬೆಂಕಿ

MLK BENKI 05
Published on

ಮೊಳಕಾಲ್ಮೂರು; ಪಟ್ಟಣದ ಬಸ್ ನಿಲ್ದಾಣದ ಸಮೀಪ ಭಾನುವಾರ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಬೀಗ ಹಾಕಿದ್ದ ಅಂಗಡಿಯಲ್ಲಿ ದಿನಸಿ ಸಾಮಾನು ಸುಟ್ಟಿವೆ.

ಇಲ್ಲಿನ ಮಲ್ಲೇಶ್ವರ ಕಿರಾಣಿ ಅಂಗಡಿಯೊಂದರಲ್ಲಿ ರಾತ್ರಿ ಅಂಗಡಿಯೊಳಗಿನಿಂದ ಹೊಗೆ ಬರುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಮಾಲೀಕರನ್ನು ಕರೆಯಿಸಿ ಬೀಗ ತೆಗೆಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಪರಿಣಾಮ ಅಕ್ಕಪಕ್ಕದಲ್ಲಿ ಬಟ್ಟೆ ಅಂಗಡಿಗಳಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net