ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿ

MLK UDGATANE 22 (2)
Published on

ಮೊಳಕಾಲ್ಮೂರು: ದೇಶದ ಇತಿಹಾಸದಲ್ಲಿ ಗತವೈಭವ ಕಂಡಿರುವ ಚಿತ್ರದುರ್ಗ ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.

ತಾಲೂಕಿನ ದೇವಸಮುದ್ರ ಸಮೀಪದ ಪರಮೇಶ್ವರ ತಾತನವರ ಚೌಕಿಮಠದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದ ಯಾತ್ರಿ ನಿವಾಸವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಮೊಳಕಾಲ್ಮೂರು ಕ್ಷೇತ್ರದ ಅಭಿವೃದ್ಧಿ ನನ್ನ ಕರ್ತವ್ಯ. ಈಗಾಗಲೆ ತುಂಗಭದ್ರಾ ಹಿನ್ನೀರು ಯೋಜನೆ ಮೂಲಕ ಶಾಶ್ವತ ಕುಡಿಯುವ ನೀರು ತರುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಮೇಗಳಹಟ್ಟಿಯಿಂದ ನುಂಕೆಮಲೆ ಸಿದ್ದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆ ಹಾಗೂ ಹಾನಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಮಠದ ಜೋಗಹಳ್ಳಿಗೆ ಹೂಗುವ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್, ಡಿವೈಎಸ್‌ಪಿ ಶ್ರೀಧರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ, ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಮಾಜಿ ಅಧ್ಯಕ್ಷ ಆರ್.ಜಿ.ಗಂಗಾಧರಪ್ಪ, ತಾಪಂ ಸದಸ್ಯರಾದ ಎಸ್.ತಿಪ್ಪೇಸ್ವಾಮಿ, ನರೇಂದ್ರಬಾಬು, ಸಿಪಿಐ ಉಮೇಶ್ ಪಿಎಸ್‌ಐಗಳಾದ ಎಂ.ಕೆ.ಬಸವರಾಜ್, ಗುಡ್ಡಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net