ಸೇವೆಗೆ ಬೆಲೆ ಕಟ್ಟಲಾಗದು

MLK BETI 07 (1)
Published on

ಮೊಳಕಾಲ್ಮೂರು: ಮಹಾಮಾರಿ ಭೀತಿಗೆ ನಾಡು ತತ್ತರಿಸಿದೆ. ಇಂತಹ ವೇಳೆ ವೈದ್ಯರು, ಸಿಬ್ಬಂದಿ, ಪೊಲೀಸರು ಸೇರಿ ವಿವಿಧ ಇಲಾಖೆ ಜನರ ಸೇವೆಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಸಿದ್ದಬಸವಪ್ಪ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ವೈದ್ಯರು, ಸಿಬ್ಬಂದಿಗೆ ಗೌರವ ಸಲ್ಲಿಸಿ ಮಾತನಾಡಿದರು. ಲಾಕ್‌ಡೌನ್ ಸಂಕಷ್ಟದಲ್ಲಿರುವ ಅತ್ಯಂತ ಹಿಂದುಳಿದ ತಾಲೂಕುಗಳ ಪ್ರವಾಸ ಮಾಡಿ ಅಲ್ಲಿನ ಜನರ ಸ್ಥಿತಿಗತಿ ಬಗ್ಗೆ ವಾಸ್ತವ ಸಂಗತಿಯನ್ನ ಸಂಗ್ರಹಿಸಿ ಸರ್ಕಾರದ ಗಮನಕ್ಕೆ ತರುವಂತ ಕಾರ್ಯ ಜೆಡಿಎಸ್ ಮಾಡಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net