ಶಿವಾಜಿ ಅಪ್ರತಿಮ ವೀರ

MLK JAYANTHI 22
Published on

ಮೊಳಕಾಲ್ಮೂರು: ಛತ್ರಪತಿ ಶಿವಾಜಿ ಈ ನಾಡು ಕಂಡ ಅಪ್ರತಿಮ ವೀರ ಎಂದು ಡಾ.ಪಿ.ಎಂ.ಮಂಜುನಾಥ್ ಹೇಳಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವದಲ್ಲಿ ಮಾತನಾಡಿ, ಭಾರತೀಯ ಹಿಂದು ಪರಂಪರೆಯ ಸಮಾಜ ಕಟ್ಟುವಲ್ಲಿ ಅವರ ಕಲ್ಪನೆ ಬಹುದೊಡ್ಡದಾಗಿತ್ತು ಎಂದರು.

ಉಪನ್ಯಾಸಕ ರವೀಂದ್ರನಾಥ ಮಾತನಾಡಿ, ಛತ್ರಪತಿ ಶಿವಾಜಿ ಅವರ ದೇಶ ಪ್ರೇಮದ ಆದರ್ಶಗಳು ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.

ಮುಖಂಡರಾದ ಪಿ.ಯರ‌್ರಿಸ್ವಾಮಿ, ಆರ್.ರಾಜು, ಶಿವಾಜಿ, ನರೇಂದ್ರ, ಡಿಶ್ ರಾಜು, ಡಿ.ಎಂ.ಈಶ್ವರಪ್ಪ, ಸುರೇಶ್, ನರಸಿಂಹ, ಗೋವಿಂದಪ್ಪ, ಶಿರಸ್ತೇದಾರ ಅಂಜಿನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net