

ಮೂಡಲಗಿ: ಬಸವಣ್ಣನ ತತ್ತ್ವ, ವ್ಯಕ್ತಿತ್ವದಿಂದ ಪ್ರಭಾವಿತರಾದ ಮೋಳಿಗೆ ಮಾರಯ್ಯ ತಮ್ಮ ವಚನಗಳಲ್ಲಿ ಡಂಭಾಚಾರವನ್ನು ಕಟುವಾಗಿ ಟೀಕಿಸಿದ ಕಾಯಕನಿಷ್ಠ ಶರಣ ಎಂದು ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು. ತಾಲೂಕಿನ ಅರಬಾವಿಯ ಜಗದ್ಗುರು ದುರದುಂಡೀಶ್ವರ ಮಠದ 19ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮೋಳಿಗೆ ಮಾರಯ್ಯ ಜೀವನ ಚರಿತ್ರೆ ಕುರಿತು ಈಚೆಗೆ ಉಪನ್ಯಾಸ ನೀಡಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಅರಬಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಜೀವನದಲ್ಲಿ ಆನಂದ ಪಡೆಯಬಹುದು ಎಂದರು. ಶರಣ ದಂಪತಿ ದಿ.ಚಂಬಕ್ಕ ಮತ್ತು ಈಶ್ವರಪ್ಪ ಸಿದ್ರಾಮಪ್ಪ ನಿಜಗುಲಿ ಸ್ಮರಣೆಯಲ್ಲಿ ಅವರ ಪುತ್ರ ಶಿವಾನಂದ ನಿಜಗುಲಿ ಮಠದ ದಾಸೋಹ ಭವನ ಕಟ್ಟಡಕ್ಕೆ ರೂ.5 ಲಕ್ಷ ರೂ. ದೇಣಿಗೆ ನೀಡಿದ ಪ್ರಯುಕ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸವದತ್ತಿಯ ವಲಯ ಅರಣ್ಯಾಧಿಕಾರಿ ಸಂಜೀವ ಸಂವಸುದ್ದಿ, ಕಷಿ ಸಾಧಕ ಲಕ್ಷ್ಮೀಕಾಂತ ಸೊಲ್ಲಾಪುರ, ಶಿಕ್ಷಕ ಅಪ್ಪಾಸಾಹೇಬ ಕುರುಬರ, ವಿ.ಕೆ. ನಾಯ್ಕ ಇತರರಿದ್ದರು.