ರುದ್ರಭೂಮಿಗಾಗಿ ಜಾಗ ನೀಡಿ

MLK manavi 21
Published on

ಮೊಳಕಾಲ್ಮೂರು: ತಾಲೂಕಿನ ಚಿಕ್ಕೋಬನಹಳ್ಳಿಯಲ್ಲಿ ರುದ್ರಭೂಮಿ ಜಾಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿದರು.

3500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಸಮುದಾಯ ಹೆಚ್ಚಿದೆ. ಅನಾದಿ ಕಾಲದಿಂದಲೂ ಸೂಕ್ತ ರುದ್ರಭೂಮಿ ವ್ಯವಸ್ಥೆ ಇಲ್ಲ. ಗ್ರಾಮದ ಅಕ್ಕಪಕ್ಕದ ಜಾಗದಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ.

ಈಗ ಊರು ಬೆಳೆದಂತೆಲ್ಲಾ ಸಮಸ್ಯೆ ಹೆಚ್ಚಾಗುತ್ತಿದೆ. ಕೂಡಲೇ ರುದ್ರಭೂಮಿಗೆ ಜಾಗ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಡಿ.ಒ.ಮುರಾರ್ಜಿ, ಕೆ.ಆರ್.ಬೋರಣ್ಣ, ಬೋಜಪ್ಪ, ಓಬಯ್ಯ, ಪಾಪಣ್ಣ, ತಿಪ್ಪೇಸ್ವಾಮಿ, ಪಾಲಯ್ಯ, ಸಣ್ಣಬೋರಯ್ಯ, ತಿಪ್ಪೇರುದ್ರ, ವೆಂಕಟೇಶ, ಸಾದಿಕ್ ಪಾಷ, ಬಸಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net