ಪೌರ ಕಾರ್ಮಿಕರಿಗೆ ಆಹಾರ ವಿತರಣೆ

MLK ANNA DAANA 01
Published on

ಮೊಳಕಾಲ್ಮೂರು: ಕಾರ್ಮಿಕರ ದಿನಾಚರಣೆ ಅಂಗವಾಗಿ ನಗರದ ಗುರು ರಾಘವೇಂದ್ರ ಶಾಖಾ ಮಠದಿಂದ ಶುಕ್ರವಾರ ಪೌರ ಕಾರ್ಮಿಕರಿಗೆ ಮೊಸರನ್ನ, ಪುಳಿಯೋಗರೆ ವಿತರಣೆ ಮಾಡಲಾಯಿತು.

ಮಠದ ಆಡಳಿತ ಮಂಡಳಿ ಸದಸ್ಯ ಎಂ.ಎಸ್.ಗೋಪಿನಾಥ್ ಮಾತನಾಡಿ, ಆರೋಗ್ಯ ಲೆಕ್ಕಿಸದೆ ದೇಶದ ಪ್ರಗತಿ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು, ಪೌರಕಾರ್ಮಿಕರ ಹಿತ ಕಾಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಬದ್ಧತೆ ತೋರಬೇಕು ಎಂದರು.

ಕರೊನಾ ಹತೋಟಿಗೆ ಸ್ವಚ್ಛತೆ ಬಹುಮುಖ್ಯ. ಇಂತಹ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಸಮುದಾಯ ಕೈಲಾದ ನೆರವು ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net