ವಿದ್ಯಾರ್ಥಿಗಳಿಂದ ಮಾಸ್ಕ್ ವಿತರಣೆ

MLK MASK 10
Published on

ಮೊಳಕಾಲ್ಮೂರು: ರೋವರ್ಸ್, ರೇಂಜರ್ಸ್‌ ಘಟಕದ ಪದವಿ ವಿದ್ಯಾರ್ಥಿಗಳು ಲಾಕ್‌ಡೌನ್ ಅವಧಿಯಲ್ಲಿ ತಯಾರಿಸಿದ್ದ ಸಾವಿರ ಮಾಸ್ಕ್‌ಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪ್ರಭಾರ ಬಿಇಒ ಎನ್.ಹನುಮಂತಪ್ಪ ಅವರಿಗೆ ಪ್ರಾಂಶುಪಾಲ ಡಿ.ಸೂರಯ್ಯ ಮಾಸ್ಕ್ ನೀಡಿದರು.

ಸ್ಕೌಟ್ ಮತ್ತು ಗೈಡ್ಸ್‌ನ ತಾಲೂಕು ಆಯುಕ್ತ ಜಿಂಕಾ ಶ್ರೀನಿವಾಸ್, ಕಾರ್ಯದರ್ಶಿ ಬಿ.ಬಡಯ್ಯ, ಉಪನ್ಯಾಸಕರಾದ ಟಿ.ಸುಷ್ಮಾ, ವಿಶ್ವರಾಜ್, ಶಿಕ್ಷಕರಾದ ಕೆ.ಪರಮೇಶ್ವರಪ್ಪ, ಸಿದ್ದಪ್ಪ, ಟಿ.ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net