ಮೀನುಗಾರರಿಗೆ ಪ್ರವೇಶ ನಿರಾಕರಣೆ

MLK KARMIKARU 09 (3)
Published on

ಮೊಳಕಾಲ್ಮೂರು: ಉಡುಪಿಯ ಮಲ್ಪೆ ಬೀಚಿನಿಂದ ಆಂಧ್ರದ ಶ್ರೀಕಾಕುಳಂ ಜಿಲ್ಲೆಗೆ ಹೊರಟ್ಟಿದ್ದ 180 ಮೀನುಗಾರರಿಗೆ ಇಲ್ಲಿನ ಯದ್ದಲಬೊಮ್ಮಯ್ಯನಹಟ್ಟಿ ಸಮೀಪದ ಚೆಕ್‌ಪೋಸ್ಟ್‌ನಲ್ಲಿ ಪ್ರವೇಶ ನಿರಾಕರಿಸಿದ್ದರಿಂದ ರಾತ್ರಿ ಇಡೀ ಬಸ್‌ನಲ್ಲೇ ಕಾಲ ಕಳೆದರು.

ಶುಕ್ರವಾರ ರಾತ್ರಿ 10.30ಕ್ಕೆ ಆರು ಸಾರಿಗೆ ಬಸ್‌ಗಳು ಆಗಮಿಸುತ್ತಿದ್ದಂತೆ ಆಂಧ್ರ ಪೊಲೀಸರು ಶಿಫಾರಸು ಪತ್ರಗಳ ಪರಿಶೀಲನೆ ನಡೆಸಿದರು. ಆಂಧ್ರ ಸರ್ಕಾರದ ಉನ್ನತ ಅಧಿಕಾರಿಗಳ ಅನುಮತಿ ಪತ್ರ ಇಲ್ಲದ ಕಾರಣ ಪ್ರವೇಶ ನಿರಾಕರಿಸಿದರು.

ಶನಿವಾರ ಬೆಳಗ್ಗೆ ತಹಸೀಲ್ದಾರ್ ಎಂ.ಬಸವರಾಜ್ ಸ್ಥಳಕ್ಕೆ ದೌಡಾಯಿಸಿ ಚಿತ್ರದುರ್ಗ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಬಳಿಕ ಅನಂತಪುರ, ಉಡುಪಿ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಪರಸ್ಪರ ಚರ್ಚಿಸಿದ ನಂತರ ಬೆಳಗ್ಗೆ 10.30ಕ್ಕೆ ಬಸ್‌ಗಳು ತೆರಳಲು ಅವಕಾಶ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net