ರೋಗಿಗಳಿಗೆ ಉಚಿತ ಊಟದ ವ್ಯವಸ್ಥೆ

MLK BETI 29
Published on

ಮೊಳಕಾಲ್ಮೂರು: ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ತಾತ್ಕಾಲಿಕವಾಗಿ ಉಪಹಾರದ ಉಚಿತ ವ್ಯವಸ್ಥೆಗೆ ತಾಲೂಕು ಆಡಳಿತ ಸೂಕ್ತ ಕ್ರಮವಹಿಸಿದೆ ಎಂದು ಇಒ ಪ್ರಕಾಶ್ ತಿಳಿಸಿದರು.

ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಕರೊನಾ ರೋಗವನ್ನ ಹತೋಟಿಗೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.

ಕೆಮ್ಮು, ನೆಗಡಿ, ಜ್ವರ ಎಂದು ಬಂದವರನ್ನ ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ನೆಗಟೀವೆ ಬಂದರೆ ಭೀತಿಗೊಳ್ಳದಂತೆ ಆತ್ಮಸ್ಥೈರ್ಯ ತುಂಬಬೇಕು. ಜನರು ಆರೋಗ್ಯ ಸುರಕ್ಷತೆಗೆ ಮನೆಯಲ್ಲಿಯೇ ಇರಬೇಕು ಎಂದು ಜಾಗೃತಿ ಮೂಡಿಸಬೇಕು ಎಂದರು ತಿಳಿಸಿದರು.

ಕರೊನಾ ಎಫೆಕ್ಟ್‌ನಿಂದ ಹೋಟೆಲ್, ಬೇಕರಿ, ತಿಂಡಿ ಅಂಗಡಿಗಳಿಗೆ ನಿರ್ಬಂಧ ಹೇರಿರುವ ಕಾರಣ ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ತಹಸೀಲ್ದಾರ್ ನೇತೃತ್ವದಲ್ಲಿ ಉಚಿತ ಊಟ ಮತ್ತು ಶುದ್ಧ ಕುಡಿಯುವ ನೀರು ಕೊಡಲು ತಾಲೂಕು ಆಡಳಿತ ಕ್ರಮಕೈಗೊಂಡಿದೆ ಎಂದು ಹೇಳಿದರು.

ತಪಾಸಣೆ: ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದ ತಾಲೂಕಿನ ಭೈರಾಪುರದ 34 ಜನ ಹಾಗೂ ಚಿಕ್ಕೇರಹಳ್ಳಿಯ 8 ಜನ ಕಾರ್ಮಿಕರು ಭಾನುವಾರ ತಡ ರಾತ್ರಿ ಊರಿಗೆ ಬಂದಿದ್ದು, ಇವರೆಲ್ಲರನ್ನೂ ಪರೀಕ್ಷೆ ನಡೆಸಲಾಗಿದೆ. ನೆಗಟೀವ್ ಬಂದಿದ್ದರೂ ಸಮುದಾಯದವರಲ್ಲಿ ಆಂತರ ಕಾಯ್ದುಕೊಂಡು 15 ದಿನಗಳ ಕಾಲ ಪ್ರತ್ಯೇಕವಾಗಿರಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಡಾ.ಗೋವಿಂದರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net