ಬಡವರಿಗೆ ಹಾಲು ವಿತರಣೆ

MLK HALU 04
Published on

ಮೊಳಕಾಲ್ಮೂರು: ಪಟ್ಟಣ ಪಂಚಾಯಿತಿ ಆವರಣದಲ್ಲಿ ಶನಿವಾರ ಹಾಲು ಉಚಿತ ವಿತರಣೆ ಕಾರ್ಯಕ್ಕೆ ತಹಸೀಲ್ದಾರ್ ಎಂ.ಬಸವರಾಜ್ ಚಾಲನೆ ನೀಡಿದರು.

ಬಳಿಕ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ನಗರದ ಬಡವರು, ನಿರಾಶ್ರಿತರು ಹಾಗೂ ಅಲೆಮಾರಿಗಳಿಗೆ ಏ.14ರ ವರೆಗೆ ಪ್ರತಿ ಮನೆಗೆ ಒಂದು ಲೀಟರ್ ಹಾಲು ವಿತರಣೆಗೆ ಕ್ರಮವಹಿಸಲಾಗಿದೆ ಎಂದರು.

ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್, ತಾಪಂ ಇಒ ಪ್ರಕಾಶ್, ಸಮಾಜ ಕಲ್ಯಾಣಾಧಿಕಾರಿ ಪ್ರೇಮನಾಥ, ಪಪಂ ಬಿಇಒ ಎಂ. ಸೋಮಶೇಖರ್, ಅಕ್ಷರ ದಾಸೋಹ ಅಧಿಕಾರಿ ಪಾತಲಿಂಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ, ಪಾಪೇಶ್, ಪಪಂ ಸದಸ್ಯರಾದ ಟಿ.ರವಿಕುಮಾರ್, ತಿಪ್ಪೇಸ್ವಾಮಿ, ಲಕ್ಷ್ಮಣ, ಸಿದ್ದಣ್ಣ, ವಿನಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net