ಇಂದು ನುಂಕೆಮಲೆ ಜಾತ್ರೆ ಆರಂಭ

MLK JATRE 08
Published on

ಮೊಳಕಾಲ್ಮೂರು: ಪಟ್ಟಣದಲ್ಲಿ ಫೆ.9ರಿಂದ 13ರ ವರೆಗೆ ಇತಿಹಾಸ ಪ್ರಸಿದ್ಧ ನುಂಕೆಮಲೆ ಸಿದ್ದೇಶ್ವರಸ್ವಾಮಿ ಜಾತ್ರೋತ್ಸವ ಜರುಗಲಿದೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಇದಾಗಿದ್ದು, ಫೆ.9ರ ಮಧ್ಯಾಹ್ನ 1ಕ್ಕೆ ನುಂಕೆಮಲೆ ಬೆಟ್ಟದಿಂದ ಸಿದ್ದೇಶ್ವರಸ್ವಾಮಿಯನ್ನು ಡೊಳ್ಳು ವಾದ್ಯಗಳಿಂದ ಪಟ್ಟಣದ ಹಾನಗಲ್ ರಸ್ತೆ ಸಮೀಪದ ಪಾದಗಟ್ಟೆ ಕರೆತಂದು ಪ್ರತಿಷ್ಠಾಪಿಸಲಾಗುತ್ತದೆ. ಸಂಜೆ ರಾಜ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೋಟೆ ಬಡಾವಣೆಯ ನುಂಕಪ್ಪನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ರಾತ್ರಿ 10.30ಕ್ಕೆ ಮೇಲ್ದುರ್ಗದ ಕಂಪಳರಾಯನ ಬೆಟ್ಟದ ಹೊಂಡದಲ್ಲಿ ಗಂಗಾಪೂಜೆ, ಸಿದ್ಬಕ್ತಿ ಇನ್ನಿತರ ವಿಶೇಷ ಪೂಜೆಗಳು ನೆರವೇರಲಿವೆ. 10ರ ಬೆಳಗ್ಗೆ ಶ್ರೀಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಮಹಾಮಂಗಳಾರತಿ ಬಳಿಕ ದೇವರನ್ನು ಪುನಃ ಪಾದಗಟ್ಟೆಗೆ ಕರೆತರಲಾಗುತ್ತದೆ.

ಮೂರು ದಿನಗಳ ಉತ್ಸವಕ್ಕೆ ರಾಜ್ಯದೆಲ್ಲೆಡೆಯಿಂದ 50 ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ ಎಂದು ಊರಿನ ಯಜಮಾನ ಚಂದ್ರಶೇಖರ ಗೌಡ ಹಾಗೂ ಜಾತ್ರಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net