ಕೇಂದ್ರದ ವಿರುದ್ಧ ಹೋರಾಟ

mlk goosti.. jan. 6.
Published on

ಮೊಳಕಾಲ್ಮೂರು: ದಲಿತರು, ರೈತರು ಹಾಗೂ ಕಾರ್ಮಿಕ ವರ್ಗದ 12 ಬೇಡಿಕೆಗಳ ಈಡೇರಿಕೆಗಾಗಿ ಜ.8ರಂದು ಕರೆಕೊಟ್ಟಿರುವ ಭಾರತ್ ಬಂದ್ ಬೆಂಬಲಿಸಿ ಪ್ರಗತಿಪರ ಸಂಘಟನೆಗಳಿಂದ ಮೊಳಕಾಲ್ಮೂರು ಬಂದ್ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಜಾಫರ್ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಆಡಳಿತ ವೈಖರಿ ಜನಪರವಾಗಿಲ್ಲ. ಹಲವು ಬಾರಿ ಕೆಳವರ್ಗದವರ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಿ ಹಕ್ಕೊತ್ತಾಯ ಮಾಡಿದರೂ ಸ್ಪಂದಿಸಿಲ್ಲ ಎಂದು ದೂರಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇಲ್ಲ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕೃಷಿ ಬದುಕು ಅತಂತ್ರವಾದರೂ ನೆರವಿಗೆ ಬರದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ಸಿಐಟಿಯು ಜಿಲ್ಲಾ ಸಂಚಾಲಕ ಡಿ.ಎಂ.ಮಲಿಯಪ್ಪ ಮಾತನಾಡಿ, ಜ.8ರ ಪಟ್ಟಣದಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮುಷ್ಕರ ಇರುತ್ತೆ. ವ್ಯಾಪಾರಸ್ಥರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಕೋರಿದರು.

ವಿವಿಧ ಸಂಘಟನೆಗಳ ಮುಖಂಡರಾದ ಮರ‌್ಲಹಳ್ಳಿ ರವಿಕುಮಾರ, ಎಚ್.ಎ.ಮಾರಣ್ಣ, ಕೊಂಡಾಪರ ಪರಮೇಶಿ, ಕೆ.ಟಿ.ನಾಗರಾಜ, ಜಿಂಕಾ ಶ್ರೀನಿವಾಸ್, ವಾಂಜ್ರೆ ರಮೇಶ್, ಡಿ.ಬಿ.ಕೃಷ್ಣಮೂರ್ತಿ, ಡಿ.ಪೆನ್ನಯ್ಯ, ದಾನಸೂರನಾಯಕ, ವೈ.ನಾಗರಾಜ್, ತಿಮ್ಮಣ್ಣ, ಸಿ.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net