ದೇವರ 150 ಎತ್ತುಗಳಿಗೆ ಮೇವು

MLK MEVU 01
Published on

ಮೊಳಕಾಲ್ಮೂರು: ತಾಲೂಕಿನ ರಾಯಾಪುರ ಮ್ಯಾಸರಹಟ್ಟಿ ಸಮೀಪದ ಶ್ರೀ ಶೈಲಮಲ್ಲಿಕಾರ್ಜುಸ್ವಾಮಿ ದೇಗುಲಕ್ಕೆ ಸೇರಿದ್ದ 150 ಎತ್ತುಗಳಿಗೆ ಸೋಮವಾರ ಮೂರು ಟ್ರ್ಯಾಕ್ಟರ್‌ಗಳಲ್ಲಿ ಮೇವು ಒದಗಿಸಲಾಯಿತು.

ಮೇವಿಲ್ಲದೆ ಸೊರಗುತ್ತಿದ್ದ ದೇವರ ಎತ್ತುಗಳ ಬಗ್ಗೆ ಕಳೆದ ವಾರ ವಿಜಯವಾಣಿ ವರದಿ ಪ್ರಕಟಿಸಿತ್ತು. ಈ ಸಂಬಂಧ ಭಕ್ತರು ಕೂಡ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಗಮನಸೆಳೆದಿದ್ದರು.

ಇದಕ್ಕೆ ಸ್ಪಂದಿಸಿದ ಸಚಿವರು ವೈಯಕ್ತಿಕ ಹಣದಲ್ಲಿ ಮೂರು ಟ್ರಾೃಕ್ಟರ್ ಲೋಡ್ ಮೇವು ಪೂರೈಸಿ ದೇವರ ಎತ್ತು ಗಳ ಹಸಿವು ನೀಗಿಸಿದ್ದಾರೆ.

ತಹಸೀಲ್ದಾರ್ ಎಂ.ಬಸವರಾಜ್ ಮಾತನಾಡಿ, ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಮೇವು, ನೀರಿನ ಸೌಕರ್ಯಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಸ್ಥಳೀಯ ಭಕ್ತರಾದ ಕೆಂಗಯ್ಯ ಅಜ್ಜಣ್ಣ, ಮಂಜುನಾಥ, ತಿಪ್ಪೇಸ್ವಾಮಿ, ಗೋಪಿನಾಥ್, ಪಾಪಯ್ಯ ಇತರರಿದ್ದರು.

ದೇವರ ಎತ್ತುಗಳಿಗೆ ಮೇವು, ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕೆಂಬ ಸಚಿವರ ಸೂಚನೆ ಮೇರೆಗೆ ಮೇವು ಒದಗಿಸಲಾಗಿದೆ ಎಂದು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ತಿಳಿಸಿದರು.

ದೇವರ ಎತ್ತುಗಳ ಆರಾಧನೆಯೇ ನಮ್ಮ ಕಾಯಕ. ಇಷ್ಟು ದಿನ ಅಡವಿಯಲ್ಲಿ ಸಿಗುವ ಮೇವು, ನೀರು ಆಸರೆ ಆಗಿತ್ತು. ಸತತ ಮಳೆ ಅಭಾವದಿಂದ ಪರಿಸ್ಥಿತಿ ಉಲ್ಬಣಿಸಿದ್ದರಿಂದ ಸಚಿವರ ಗಮನಸೆಳೆಯಲಾಗಿತ್ತು. ಇದಕ್ಕವರು ಸ್ಪಂದಿಸಿದ್ದರೆ.
ಮುತ್ತಯ್ಯ, ಮಲ್ಲಯ್ಯ
ದೇವರ ಎತ್ತುಗಳ ಕಿಲಾರಿಗಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net