ಸೇವೆಯೇ ಸಂಘ ಸಂಸ್ಥೆಗಳ ಪರಮ ಗುರಿ

MLK udgatane.. mar.. 16.
Published on

ಮೊಳಕಾಲ್ಮೂರು: ಸಂಘ-ಸಂಸ್ಥೆಗಳ ಹೆಸರು ವೈಯಕ್ತಿಕ ಹಿತಾಸಕ್ತಿ ಹಾಗೂ ಪ್ರತಿಷ್ಠೆಗೆ ಬಳಕೆಯಾಗದೆ ಸಮಾಜ ಸೇವೆಯೇ ಪರಮ ಗುರಿಯಾಗಬೇಕು ಎಂದು ಎಂದು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡರಗಿ ನಾಗರಾಜ್ ತಿಳಿಸಿದರು.

ತಾಲೂಕಿನ ತಿಮ್ಮಲಾಪುರದಲ್ಲಿ ಸೋಮವಾರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದರು.

ಸಂಘ ಹುಟ್ಟು ಹಾಕುವುದು ಸುಲಭ. ಆದರೆ, ಅದರ ಧ್ಯೇಯದಂತೆ ನಡೆಯುವುದು ಕಠಿಣ. ಇದರಲ್ಲಿ ಯಶಸ್ವಿಯಾದರೆ ಸಂಘಟನೆಯ ಹುಟ್ಟು ಸಾರ್ಥಕತೆ ಪಡೆಯುತ್ತದೆ ಎಂದು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘಟನೆ ತಾಲೂಕು ಸಂಚಾಲಕ ಪರಮೇಶಿ ಮಾತನಾಡಿ, ತಾಲೂಕಿನಲ್ಲಿ ಸಂಘಟನೆ ಬಲಗೊಳಿಸಬೇಕು. ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕು. ಸೌಲಭ್ಯ ವಂಚಿತರಿಗೆ ಸರ್ಕಾರಿ ಸೌಕರ್ಯ ಕಲ್ಪಿಸಿಕೊಡುವಲ್ಲಿ ಹೋರಾಟ ನಡೆಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಂಚಾಲಕ ಬಿ.ಟಿ.ನಾಗಭೂಷಣ, ತಾಪಂ ಮಾಜಿ ಸದಸ್ಯ ಎ.ಕೆ.ಮಂಜುನಾಥ, ಮುಖಂಡರಾದ ಗಂಗಾಧರ, ಸಿ.ಹೊನ್ನೂರಪ್ಪ, ಕೆ.ಬಸವರಾಜ್, ಪಿ.ಲೋಕೇಶ, ವಕೀಲ ಹುಲುಗಪ್ಪ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಕಾಡಪ್ಪ, ಮೂರ್ತಿ, ವಿರೂಪಾಕ್ಷಪ್ಪ, ಚಂದ್ರಣ್ಣ, ಗಣೇಶ, ಯರ‌್ರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net