ಪಠ್ಯ ಪುಸ್ತಕ ಖರೀದಿಗೆ ಮುಂದೆ ಬಾರದ ಶಾಲೆಗಳು !

molakalmuru text book
Published on

ವಿಜಯವಾಣಿ ವಿಶೇಷ ಮೊಳಕಾಲ್ಮೂರು
ಅನುದಾನ ರಹಿತ ಶಾಲಾ ಮಕ್ಕಳಿಗೆ ತರಿಸಿರುವ ಪಠ್ಯ ಪುಸ್ತಕಗಳನ್ನು ಖರೀದಿಸಲು ಖಾಸಗಿ ಶಾಲೆಗಳ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಿಂದೇಟು ಹಾಕುತ್ತಿದ್ದಾರೆ.

ತಾಲೂಕಿನಲ್ಲಿ 32 ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. 1ರಿಂದ 10ನೇ ತರಗತಿಯಲ್ಲಿ ಅಂದಾಜು 7 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸದ್ಯ 10 ಲಕ್ಷ ರೂ. ಮೊತ್ತದ ಪುಸ್ತಕಗಳು ಬಂದಿವೆ. ಆದರೆ, ಶಿಕ್ಷಣ ಇಲಾಖೆಗೆ ಹಣ ತುಂಬಿ ವಿಷಯವಾರು ಪುಸ್ತಕಗಳನ್ನು ಕೊಂಡೊಯ್ಯಲು ಹಣದ ಕೊರತೆ ನೆಪವೊಡ್ಡಿ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಶೇ.50ರಷ್ಟು ಪುಸ್ತಕಗಳು ಮಾತ್ರ ವಿತರಣೆಯಾಗಿವೆ. ಉಳಿದ 16 ಶಾಲೆಗಳ ಪುಸ್ತಕಗಳು ಇಲ್ಲಿನ ಕೊಠಡಿಯಲ್ಲಿ ಧೂಳು ತಿನ್ನುತ್ತಿವೆ.

ಕರೊನಾ ಎಫೆಕ್ಟ್‌ನಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡುತ್ತಿದ್ದಂತೆ ಅನುದಾನ ರಹಿತ ಶಾಲೆಗಳಿಗೆ ಗರಬಡಿದಂತೆ ಆಗಿದೆ.
ಮಕ್ಕಳಿಂದ ಶುಲ್ಕ ವಸೂಲಿಗೆ ಬ್ರೇಕ್ ಬೀಳುತ್ತಿದ್ದಂತೆ ಶಿಕ್ಷಕರ ವೇತನಕ್ಕೂ ಕೂಡ ಕತ್ತರಿ ಬಿದ್ದಿದೆ. ಅಕ್ಟೋಬರ್ ಬಂದರೂ ಶಾಲೆ ಪ್ರಾರಂಭಿಸಲು ಅನುಮತಿ ಸಿಗದ ಕಾರಣ ಆಡಳಿತ ಮಂಡಳಿಯವರನ್ನು ಪೇಚಿಗೆ ಸಿಲುಕಿದಂತಾಗಿದೆ.
ಹಣ ಪಾವತಿಸಿ ಪುಸ್ತಕ ಕೊಂಡೊಯ್ಯಿರಿ ಎಂದು ಅನುದಾನ ರಹಿತ ಶಾಲಾ ಮಂಡಳಿ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪದೇ ಪದೆ ಫೋನ್ ಮಾಡಿದರೂ ಇತ್ತ ಕಡೆ ಸುಳಿಯುತ್ತಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net