ಹಣಕ್ಕಿಂತ ಆರೋಗ್ಯ ಗಳಿಕೆ ಮುಖ್ಯ

mlk shibira.. mar.. 18.
Published on

ಮೊಳಕಾಲ್ಮೂರು: ತಾಯಂದಿರಷ್ಟೇ ಮಗುವಿನ ಆರೈಕೆಯೂ ಮುಖ್ಯ ಎಂದು ತಾಲೂಕು ಪಂಚಾಯಿತಿ ಇಒ ಪ್ರಕಾಶ್ ಸಲಹೆ ನೀಡಿದರು.

ತಾಲೂಕಿನ ನಾಗಸಮುದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಪಂ, ಆರೋಗ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಕುರಿತು ಪ್ರಾತ್ಯಕ್ಷಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಹಣ, ಆಸ್ತಿಗಿಂತ ಆರೋಗ್ಯ ಮುಖ್ಯ. ಇದು ಸರಿ ಇದ್ದರೆ ಎಲ್ಲವನ್ನೂ ಪಡೆಯಬಹುದು. ಗರ್ಭಿಣಿ, ಬಾಣಂತಿಯರು ಕಿಶೋರಿಯರ ಸುಖಿ ಜೀವನಕ್ಕಾಗಿ ಹಿತ ಮಿತ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಶುದ್ಧ ನೀರು, ತಾಜಾ ಹಣ್ಣು, ತರಕಾರಿ, ಮೊಳಕೆ ಕಾಳು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.

ಡೆಂೆ, ಚಿಕೂನ್‌ಗುನ್ಯಾ, ಮಲೇರಿಯಾ, ಈಚೆಗೆ ಬಂದ ಕರೊನಾದಂತಹ ಮಾರಣಾಂತಿಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜತೆಗೆ ಮನೆ, ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿಟ್ಟುಕೊಳ್ಳಬೇಕು. ನಿತ್ಯ ಬಿಸಿ ನೀರು ಕುಡಿಯಬೇಕು ಎಂದರು.

ಆರೋಗ್ಯಾಧಿಕಾರಿ ಸ್ವಾಮಿದೇವ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಆರೋಗ್ಯ ಸುರಕ್ಷಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕಾರ್ಯಕ್ರಮ ಅಧಿಕಾರಿ ನವೀನ್, ರೆಹಮಾನ್, ಜಿಪಂ ಮಾಜಿ ಸದಸ್ಯ ಎನ.ಬಿ.ಗೋವಿಂದಪ್ಪ, ಪಿಡಿಒ ಪಾತಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net