

ಮೊಳಕಾಲ್ಮೂರು: ಉದ್ಯೋಗ ಖಾತ್ರಿ ಕಾಮಗಾರಿ ವೇಳೆ ಕೂಲಿ ಕಾರ್ಮಿಕರು ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು ಎಂದು ತಾಪಂ ಇಒ ಪ್ರಕಾಶ್ ಸಲಹೆ ನೀಡಿದರು.
ತಾಲೂಕಿನ ಜೆಬಿಹಳ್ಳಿಯಲ್ಲಿ ಗುರುವಾರ ಗ್ರಾಪಂ ಮತ್ತು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕೋವಿಡ್-19 ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವ ಸಂಕುಲವನ್ನು ಕಾಡುತ್ತಿರುವ ಕರೊನಾ ಸೋಂಕಿನ ವಿರುದ್ಧ ಹೋರಾಟ ನಡೆಸಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು.
ಡಾ.ಮಧುಕುಮಾರ್ ಮಾತನಾಡಿ, ಕೆಮ್ಮು, ನೆಗಡಿ, ಶೀತ, ಜ್ವರ ಕಾಣಿಸಿಕೊಂಡರೆ ಉದಾಸೀನ ಮಾಡದೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಕುರುಗೊಡಪ್ಪ, ಪಿಡಿಒ ಯಶವಂತ್, ದೇವರಾಜ್ ಇದ್ದರು.