ಆಧ್ಯಾತ್ಮಿಕ ಚಿಂತಕ ಪ್ರೇರಣೆಯಾಗಲಿ

MLK JAYANTHI 12 (2)
Published on

ಮೊಳಕಾಲ್ಮೂರು: ಆಧ್ಯಾತ್ಮಿಕ ಚಿಂತಕ, ಸಮಾಜ ಸುಧಾರಣೆ ಮುಂಚೂಣಿ ನಾಯಕ ಸ್ವಾಮಿ ವಿವೇಕಾನಂದರ ಜೀವನಾದರ್ಶ ಸರ್ವರಿಗೂ ಪ್ರೇರಣೆದಾಯಕ ಎಂದು ಬಳ್ಳಾರಿಯ ಮೇಧಾ ಕಾಲೇಜು ಪ್ರಾಧ್ಯಾಪಕ ಜೇಸಿ ಮಂಜುನಾಥ ತಿಳಿಸಿದರು.

ಸಾಂಸ್ಕೃತಿಕ ವೇದಿಕೆ, ಯುವ ರೆಡ್‌ಕ್ರಾಸ್ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಚಿಕ್ಕಂದಿನಲ್ಲೇ ದೇಶಾಭಿಮಾನ ರೂಢಿಸಿಕೊಂಡಿದ್ದ ವಿವೇಕಾನಂದರು ಚಿಕಾಗೊ ಸರ್ವ ಧರ್ಮ ಸಮ್ಮೇಳನದ ಮೂಲಕ ಇಡೀ ವಿಶ್ವಕ್ಕೆ ಚಿರಪರಿಚಿತರಾದ ಮಹಾನ್ ಚೇತನ ಎಂದು ಬಣ್ಣಿಸಿದರು.

ಸಮಾಜ ಚಿಂತಕಿ ಪ್ರೊ.ಲಲಿತಾ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಸದ್ವಿನಿಯೋಗ ಮಾಡಿಕೊಳ್ಳಲು ವಿವೇಕಾನಂದರ ತತ್ವಾದರ್ಶ ಪಾಲಿಸಬೇಕು. ಸಾಧನೆಯ ಗುರಿಯತ್ತ ಸದಾ ಗಮನಹರಿಸಬೇಕು ಎಂದು ತಿಳಿಸಿದರು.

ತಾಪಂ ಅಧ್ಯಕ್ಷೆ ಜಿ.ಬೋರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರೊ.ಬಿ.ರಾಮಸ್ವಾಮಿ, ಪ್ರೊ.ಡಾ.ಕೆ.ವಿ.ಪ್ರಜ್ಞಾ, ಪ್ರೊ.ಒ.ತಿಮ್ಮಯ್ಯ, ವಿ.ವಿಶ್ವರಾಜ್, ಸಿ.ಚಿತ್ತಯ್ಯ, ವಿ.ನಾಗರಾಜ್, ಸುಮಂಗಲಾ, ತಿಪ್ಪೇರುದ್ರಪ್ಪ, ಗ್ರಂಥ ಪಾಲಕ ವಿಜಯ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net