ಫೆ.9ಕ್ಕೆ ಗಡಿನಾಡ ಸಾಂಸ್ಕೃತಿಕ ಉತ್ಸವ

MLK SABe jatre 06
Published on

ಮೊಳಕಾಲ್ಮೂರು: ತಾಲೂಕಿನ ಸಿದ್ದಯ್ಯನಕೋಟೆ ವಿಜಯ ಮಹಾಂತೇಶ್ವರ ಶಾಖಾ ಮಠದಲ್ಲಿ ಫೆ.9 ರಂದು ಜರುಗುವ ಜಾನಪದ ಜಾತ್ರೆಗೆ ರಾಜ್ಯದೆಲ್ಲೆಡೆಯಿಂದ 35 ಕ್ಕೂ ಅಧಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಛಲವಾದಿ ತಿಳಿಸಿದರು.

ಶ್ರೀಮಠದಲ್ಲಿ ಗಡಿನಾಡ ಸಾಂಸ್ಕೃತಿಕ ಜಾತ್ರಾಚರಣೆ ಕುರಿತು ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಈ ಬಾರಿಯ ಜಾನಪದ ಜಾತ್ರೆ ವಿಶೇಷತೆಯಿಂದ ಕೂಡಿರುತ್ತದೆ. ಇದರಲ್ಲಿ ಪಾಲ್ಗೊಳ್ಳುವ ಕರಡಿ ಮಜಲು, ತತ್ವಪದ, ಡೊಳ್ಳು ಕುಣಿತ, ತಮಟೆ ವಾದ್ಯ, ಕಂಸಾಳೆ, ಗೊಂಬೆ ಕುಣಿತ, ಭಜನೆ, ಕೋಲಾಟ, ವೀರಗಾಸೆ ಸೇರಿ 35 ಕ್ಕೂ ಹೆಚ್ಚು ಕಲಾ ತಂಡಗಳು ಫೆ.7 ರಂದೇ ಶ್ರೀಮಠಕ್ಕೆ ಆಗಮಿಸಿ ಎರಡು ದಿನ ತರಬೇತಿ ಪಡೆದುಕೊಳ್ಳಲಿವೆ. ಇವುಗಳ ಜತೆಗೆ ಸ್ಥಳೀಯ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮಾತನಾಡಿ, ಶ್ರೀಮಠವು ಗುರುಪರಂಪರೆ ಜತೆಗೆ ನಾಡಿನ ಸಂಸ್ಕೃತಿ ಮತ್ತು ಜನಪದ ಕಲೆಗಳ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನಾರ್ಹ ಎಂದರು.

ಸಭೆಯಲ್ಲಿ ಮಠದ ಬಸವಕೇಂದ್ರದ ಅಧ್ಯಕ್ಷ ಬೋಗೇಶ್ ಗೌಡ, ಕಾರ್ಯದರ್ಶಿ ಎಚ್. ಕಾಂತರಾಜ್ ಹಾಗೂ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net