ಸಿದ್ದರಾಮಯ್ಯ ಸೋಲಿಗೆ ಡಿಕೆಶಿ ಸಂಚು: ಸಚಿವ ಬಿ.ಶ್ರೀಮುಲು ವ್ಯಂಗ್ಯ

B Sriramulu Minister
Published on

ಮೊಳಕಾಲ್ಮೂರು: ರಾಜ್ಯದ ಜನ ಪ್ರವಾಹದಿಂದ ನರಳುತ್ತಿದ್ದರೂ ಅದನ್ನು ಲೆಕ್ಕಿಸದೆ ಜನ ಸೇರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಕೈಗೊಂಡ ಸಿದ್ದರಾಮೋತ್ಸವ ಬಗೆಗಿನ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದರು.

ಪಟ್ಟಣದಲ್ಲಿ ಬುಧವಾರ ತಾಲೂಕು ಆಡಳಿತ ಸೌಧ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮೋತ್ಸವಕ್ಕ ಯಾರೂ ಸೊಪ್ಪು ಹಾಕಲ್ಲ. ಕಾಂಗ್ರೆಸ್ ಪಾಲಿಗೆ ಇದು ಕಂಟಕವಾಗಲಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಪ್ರತೀಕಾರವಾಗಿ ಸೋಲಿನ ರುಚಿ ತೋರಿಸಲು ಡಿಕೆಶಿ ಸಂಚು ರೂಪಿಸಿದ್ದಾರೆ. ದಲಿತ ನಾಯಕ ಡಾ.ಜಿ ಪರಮೇಶ್ವರ್ ಅವರು 2018ರಲ್ಲಿ ಸಿಎಂ ಆಗುವುದನ್ನು ತಪ್ಪಿಸಲು ತಂತ್ರಗಾರಿಕೆ ಮಾಡಿದ್ದ ಸಿದ್ದರಾಮಯ್ಯ ಅವರ ಕುತಂತ್ರ ಬುದ್ಧಿಗೆ ತಕ್ಕ ಪ್ರತಿಫಲ ಅನುಭವಿಸುವ ಕಾಲ ಹತ್ತಿರ ಇದೆ ಎಂದು ಶ್ರೀರಾಮುಲು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net