

ಮೊಳಕಾಲ್ಮೂರು: ಇಲ್ಲಿನ ಮಾರುತಿ ಬಡಾವಣೆಯಲ್ಲಿ ಸೋಮವಾರ ಶ್ರೀರಾಮ ಟ್ರಸ್ಟ್, ವಿಶ್ವ ಹಿಂದು ಪರಿಷತ್‌ನಿಂದ ಸಂಸ್ಕಾರ ಭವನ ನಿರ್ಮಾಣಕ್ಕೆ ಪರಿಷತ್ ತಾಲೂಕು ಅಧ್ಯಕ್ಷ ಡಿ.ಎಂ.ಈಶ್ವರಪ್ಪ ಭೂಮಿ ಪೂಜೆ ನೆರವೇರಿಸಿದರು.
ಶಿಕ್ಷಣ, ಸಂಸ್ಕಾರ, ಸೇವೆಯ ಧ್ಯೇಯಗಳೇ ಶ್ರೀರಾಮ ಟ್ರಸ್ಟ್‌ನ ನಿರಂತರ ಸೇವೆಯಾಗಿದೆ. ಪರಿಷತ್‌ನ ಕಾರ್ಯ ಚಟುವಟಿಕೆ ನಡೆಸಲು ಸ್ವಂತ ಭವನ ಇಲ್ಲದೆ ತುಂಬಾ ಪ್ರಯಾಸ ಪಡುತ್ತಿದ್ದೆವು. ಈಗ ಕಾಲ ಕೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಟ್ರಸ್ಟ್‌ಗೆ ಸೇರಿದ ಖಾಲಿ ನಿವೇಶನದಲ್ಲಿ ಸಂಸ್ಕಾರ ಭವನ ನಿರ್ಮಾಣಕ್ಕೆ ಪ್ರದೇಶಾಭಿವೃದ್ಧಿ ಯೋಜನೆಯಡಿ 25 ಲಕ್ಷ ರೂ. ಮಂಜೂರಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಬೇಗ ಪೂರೈಸಲು ಒತ್ತು ನೀಡಲಾಗಿದೆ ಎಂದು ಹೇಳಿದರು.
ಪರಿಷತ್‌ನ ದಕ್ಷಿಣ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಬಡವ, ನಿರ್ಗತಿಕ ಅನಾಥ ಮಕ್ಕಳನ್ನ ಗುರುತಿಸಿ ಶಿಕ್ಷಣ, ಸಂಸ್ಕಾರ, ಸದ್ಗುಣಗಳನ್ನು ಬಿತ್ತುವ ಮೂಲಕ ಉತ್ತಮ ಪ್ರಜೆಯನ್ನಾಗಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಪರಿಷತ್ ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ, ಶ್ರೀರಾಮ ಟ್ರಸ್ಟ್ ಕಾರ್ಯದರ್ಶಿ ಡಾ.ಮಂಜುನಾಥ್, ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಬಸವರಾಜ್, ಮುಖಂಡರಾದ ಪಿ.ಎಂ.ಚಂದ್ರಶೇಖರ್, ಪಾಪಣ್ಣ, ಪೃಥ್ವಿರಾಜ್, ಚಂದ್ರಶೇಖರ್ ಗೌಡ, ಶಿವುಕುಮಾರ್, ಪಪಂ ಸದಸ್ಯರಾದ ತಿಪ್ಪೇಶಿ, ಮಂಜುನಾಥ್, ಲಕ್ಷ್ಮಣ ಇತರರಿದ್ದರು.