ಬಡವರಿಗೆ ನೆರವಿನ ಔದಾರ್ಯ ತೋರಿ

MLK KIT 12
Published on

ಮೊಳಕಾಲ್ಮೂರು: ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡ ಜನತೆಗೆ ಉಳ್ಳವರು ಕೈಲಾದ ಸಹಾಯ ಮಾಡುವ ಔದಾರ್ಯ ತೋರಬೇಕೆಂದು ಸೋಲಾರ್ ಕಂಪನಿ ವ್ಯವಸ್ಥಾಪಕ ಡಿ.ಆರ್.ಚೌಧರಿ ಮನವಿ ಮಾಡಿದರು.

ತಾಲೂಕಿನ ತಮ್ಮೇನಹಳ್ಳಿಯ ಹೀರೋ ಸೋಲಾರ್ ಕಂಪನಿ ವತಿಯಿಂದ ಮುರುಡಿ, ಶಿರೇಕೊಳ ಗ್ರಾಮದ 300 ಬಡ ಕುಟುಂಬಕ್ಕೆ 5 ಕೆಜಿ ಅಕ್ಕಿ, ರವೆ, ಬೇಳೆ, ಎಣ್ಣೆ, ಸಾಂಬಾರ್ ಪದಾರ್ಥ ಸೇರಿ ಒಟ್ಟು 15 ಕೆ.ಜಿ. ತೂಕದ ಆಹಾರದ ಕಿಟ್ ವಿತರಿಸಿ ಮಾತನಾಡಿದರು.

ತಾಪಂ ಇಒ ಪ್ರಕಾಶ್ ಮಾತನಾಡಿ, ಕರೊನಾ ವೈರಸ್ ತಡೆಗಾಗಿ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಯಾರಾದರು ಹೊರ ರಾಜ್ಯದಿಂದ ಬಂದಿದ್ದರೆ ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿರುವ ಸುಡುಗಾಡು ಸಿದ್ದರು, ಅಲೆಮಾರಿಗಳು, ನಿರ್ಗತಿಕರು, ನಿರಾಶ್ರಿತರಿಗೆ ಊಟಕ್ಕಾಗಿ ದವಸ ಧಾನ್ಯ ನೀಡಲಾಗುತ್ತಿದೆ. ತಾಲೂಕು ಆಡಳಿತದ ಜತೆಗೆ ಉದಾರಿಗಳು ಆಹಾರ ಧಾನ್ಯ, ಬಟ್ಟೆ ಇತ್ಯಾದಿ ವಸ್ತುಗಳನ್ನು ದಾನ ಮಾಡಬೇಕು ಎಂದು ಮನವಿ ಮಾಡಿದರು.

ರಾಂಪುರ ಪಿಎಸ್‌ಐ ಗುಡ್ಡಪ್ಪ, ಪಿಡಿಒ ಗಂಗಾಧರ ಕಣ್ಣೂರ್, ಶ್ರೀನಿವಾಸ, ತಿಪ್ಪೇಸ್ವಾಮಿ, ಸೋಲಾರ್ ಕಂಪನಿ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net