ಕಾಲೇಜು ಆವರಣಕ್ಕೆ ಬೇಕು ಭದ್ರತೆ

mlk lwod speekr jan.. 25..
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಸಂಜೆಯಾದರೆ ಸಾಕು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ನಿತ್ಯ ಮದ್ಯಪಾನ ಮಾಡುವ ಕೆಲ ಕಿಡಿಗೇಡಿಗಳು ಪ್ಲಾಸ್ಟಿಕ್ ಲೋಟ, ಬಾಟಲಿಗಳನ್ನು ಅಲ್ಲೇ ಬಿಸಾಡಿ ಹೋಗುತ್ತಾರೆ.

ಮಿನಿ ವಿಧಾನಸೌಧ ಎದುರಿರುವ ಕಾಲೇಜು 11 ಎಕರೆ ಆವರಣ ಹೊಂದಿದೆ. ಬಿಎ, ಬಿಕಾಂ, ಬಿಎಸ್‌ಡಬ್ಲ್ಯು ಪದವಿಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿಗೆ ಕಾಂಪೌಂಡ್ ಇಲ್ಲದಿದ್ದರಿಂದ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ.
ಸಂಜೆಯಾಗುತ್ತಿದ್ದಂತೆ ಕುಡುಕರ ದಂಡೆ ಇಲ್ಲಿ ಸೇರುತ್ತದೆ. ಕೆಲವರು ಬಾಟಲಿಗಳನ್ನು ಒಡೆದು ಹಾಕುವುದರಿಂದ ಬೆಳಗ್ಗೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ ಕಾಲೇಜಿಗೆ ಭದ್ರತೆ ಒದಗಿಸಬೇಕೆಂದು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net